ಜಿಲ್ಲೆ

ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಕೊಲೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

ಚಿಕ್ಕೋಡಿ

ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯನ್ನು ಅಳಿಯ ಹಾಗೂ ಮೂವರು ಸೇರಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣದ ಅಪರಾಧಿಗಳಿಗೆ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 1.4 ಲಕ್ಷ.ರೂ ದಂಡ ವಿಧಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ.

ಕೋಲಾಪುರ ಜಿಲ್ಲೆಯ ಕರವೀರ ತಾಲೂಕಿನ ನೇರಲಿ ಗ್ರಾಮದ ನಿವಾಸಿ ಸಚಿನ ಸದಾಶಿವ ಬೋಪಳೆ ಕೊಲೆಯಾದ ವ್ಯಕ್ತಿ.ಈತನನ್ನು ಅಪರಾಧಿಗಳಾದ ಪತ್ನಿಯ ತಮ್ಮ ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದ ನಿವಾಸಿ ಕೃಷ್ಣಾತ@ ಪಿಂಟು ರಾಜಾರಾಮ ಘಾಟಗೆ, ಪತ್ನಿ ಅನಿತಾ ಬೋಪಳೆ,ವನೀತಾ ಕೃಷ್ಣ ಚೌವ್ಹಾನ,ಮತ್ತು ಗಣೇಶ ಅಣ್ಣಪ್ಪ ರೇಡೆಕರ ಸೇರಿಕೊಂಡು 2020 ಸೆಪ್ಟೆಂಬರ್ ದಲ್ಲಿ ಕೊಲೆ ಮಾಡಿದ್ದರು.

ಘಟನೆ ವಿವರ :

ಕೊಲೆಯಾದ ಸಚಿನ ಬೋಪಳೆ ಆತನ ಪತ್ನಿ ಅನಿತಾ ಬೋಪಳೆ ಅವಳ ಮೇಲೆ ಶಂಕಿಸಿ ಕಿರುಕುಳ ನೀಡುತ್ತಿದ್ದನು,ಪತಿಯ ಕಿರುಕುಳವನ್ನು ತಮ್ಮನಾದ ಕೃಷ್ಣಾತ@ಪಿಂಟು ಘಾಟಗೆಗೆ ತಿಳಿಸಿದ್ದಳು.ಕೊಲೆಯಾದ ಸಚಿನನ್ನು ಹಂಚಿನಾಳ ಗ್ರಾಮಕ್ಕೆ ಕರೆಸಿಕೊಂದು ಕಿರುಕುಳದ ಬಗ್ಗೆ ಪ್ರಶ್ನಿಸಿದ ವೇಳೆ ಗಲಾಟೆ ನಡೆದು,ಆರೋಪಿತರು ಕೊಲೆ ಮಾಡಿದರು. ಶವವನ್ನು ಎಮ್ಮೆ ಕರು ಸತ್ತಿದೆ ಎಂದು ಜೆಸಿಬಿ ತರಸಿ ಗುಂಡಿ ತೊಡಿ ಮುಚ್ಚಿದ್ದರು.ಇದನ್ನು ನೋಡಿದ ಜೆಸಿಬಿ ಚಾಲಕನಿಗೂ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದರು.ಜೆಸಿಬಿ ಚಾಲಕ ನೀಡಿದ ದೂರಿನನ್ವಯ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿದೆ.

ಪ್ರಕರಣ ಕುರಿತು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು‌.ಪ್ರಕರಣ ಕುರಿತು ಆಗೀನ ತನಿಖಾಧಿಕಾರಿ ಸಿಪಿಐ ಎಸ್.ಡಿ ಸತ್ಯನಾಯಿಕ ದೋಷಾರೋಪಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರಾ ತಾರಕೇಶ್ವರಗೌಡ ಪಾಟೀಲ ತೀರ್ಪು ನೀಡಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ 1.4 ಲಕ್ಷ. ರೂ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.ಸರ್ಕಾರದ ಪರ ಸರ್ಕಾರಿ ಅಭಿಯೋಜಕ ವೈ.ಜಿ.ತುಂಗಳ ವಾದ ಮಂಡಿಸಿದ್ದಾರೆ