ಬಾಳೆಹೊನ್ನೂರು: ಶ್ರೀ ಜಗದ್ಗುರು ರೇಣುಕಾಚಾರ್ಯರು ಆವಿರ್ಭವಿಸಿದ ತೆಲಂಗಾಣ ರಾಜ್ಯದ ಯಾದಾದ್ರಿ ಭುವನಗಿರಿ ಜಿಲ್ಲೆ ಕೊಲನುಪಾಕ (ಕೊಲ್ಲಿಪಾಕಿ) ಶ್ರೀ ಚಂಡಿಕಾಂಬಾ ಸಮೇತ ಸ್ವಯಂಭು ಶ್ರೀ ಸೋಮೇಶ್ವರ ದೇವಸ್ಥಾನದ ಪರಿಸರದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ 66ನೇ ಜನ್ಮ ದಿನೋತ್ಸವವನ್ನು ಜನವರಿ 7ರಂದು ಹ್ಮಮಿೊಳ್ಳಲಾಗಿದೆ.
ಜನವರಿ 3ರಿಂದ 7ರವರೆಗೆ ಶ್ರೀ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಪೂಜೆ ಹಾಗೂ ಶ್ರೀ ಸ್ವಯಂಭು ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ಮಹಾರುದ್ರಾಭಿಷೇಕ, ವಿಶೇಷ ಪೂಜೆ, ಸಹಸ್ರ ಪುಷ್ಪಾರ್ಚನೆ ಹಾಗೂ ಶ್ರೀ ಚಂಡಿಕಾಂಬಾ ದೇವಿಗೆ ಕುಂಕುಮಾರ್ಚನೆ ನಡೆಯುವುದು. ಜ.7ರಂದು ನಾಡಿನ ಶಿವಾಚಾರ್ಯರ ಮತ್ತು ಧರ್ವಭಿಮಾನಿಗಳ ಉಪಸ್ಥಿತಿಯಲ್ಲಿ ಶ್ರೀಮದ್ ರಂಭಾಪುರಿ ಜಗದ್ಗುರುಗಳವರ 66ನೇ ವರ್ಷದ ಜನ್ಮ ದಿನೋತ್ಸವ ಆಚರಿಸಲಾಗುತ್ತದೆ. ಕರೊನಾ ನಿಯಮ ಗಮನದಲ್ಲಿರಿಸಿಕೊಂಡು ಈ ಆಚರಣೆ ನಡೆಯಲಿದ್ದು ಆಗಮಿಸುವ ಪ್ರತಿಯೊಬ್ಬರೂ ಸ್ಯಾನಿಟೈಸ್, ಮಾಸ್ಕ್ ಧಾರಣೆ ಮತ್ತು ಅಂತರ ಕಾಪಾಡಿಕೊಳ್ಳುವುದು ಅವಶ್ಯಕ ಎಂದು ಶ್ರೀ ಕೊಲನುಪಾಕ ಸೋಮೇಶ್ವರ ಜಗದ್ಗುರು ರೇಣುಕಾಚಾರ್ಯ ಡೆವಲಪ್ವೆುಂಟ್ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.