ಜಿಲ್ಲೆ

ಕೊರಬಾಗೆ ನ್ಯಾಯಕ್ಕಾಗಿ ಸ್ವಾಮೀಜಿಗಳ ಆಗ್ರಹ

ಕಲಬುರಗಿ: ಕಲಗುರ್ತಿ ಗ್ರಾಮದ ದೇವಾನಂದ ಕೊರಬಾ ಸಾವಿನ ಪ್ರಕರಣದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದ್ದು, ೧೦೦ ದಿನಗಳಾದರೂ ಒಬ್ಬ ಆರೋಪಿಯನ್ನು ಬಂಧಿಸಿಲ್ಲ. ಕೋಲಿ, ಕಬ್ಬಲಿಗ ಸಮಾಜ ಸಮನ್ವಯ ಸಮಿತಿ ನಿರಂತರ ಧರಣಿ, ಪ್ರತಿಭಟನೆ ನಡೆಸಿದರೂ ಸ್ಪಂದಿಸುತ್ತಿಲ್ಲ. ಕೂಡಲೇ ಈ ಪ್ರಕರಣಕ್ಕೆ ನ್ಯಾಯ ಒದಗಿಸಬೇಕು ಎಂದು ಕೋಲಿ ಸಮಾಜದ ಸ್ವಾಮೀಜಿಗಳಾದ ಶ್ರೀ ರಾಜು ಗುರುಸ್ವಾಮೀಜಿ, ಶ್ರೀ ಶರಣ ಕೊತ್ಲಪ್ಪ ಮುತ್ಯಾ ಆಗ್ರಹಿಸಿದರು.

ಜಿಲ್ಲೆಯಲ್ಲಿ ಆಡಳಿತದಲ್ಲಿರುವ ಜನಪ್ರತಿನಿಧಿಗಳು ದೇವಾನಂದ ಆತ್ಮಹತ್ಯೆಯ ವಿಷಯದಲ್ಲಿ ಸಮಾಜದ ಮುಖಂಡರಲ್ಲಿ ಒಡಕು ಮೂಡಿಸುತ್ತಿದ್ದಾರೆ. ಇಂತಹ ಪ್ರಯತ್ನವನ್ನು ಜಿಲ್ಲಾ ಉಸ್ತುವಾರಿ ಸಚಿವರು ಸ್ಥಗಿತಗೊಳಿಸಬೇಕು ಎಂದು ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

31 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಕನಿಷ್ಠ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉಸ್ತುವಾರಿ ಸಚಿವರು ಗಮನಿಸುತ್ತಿಲ್ಲ. ಸರ್ಕಾರ ಕೂಡಲೇ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ನೀಡಿ, ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಪ್ರಧಾನಿ, ರಾಜ್ಯಪಾಲರವರೆಗೆ ಪ್ರಕರಣವನ್ನು ತೆಗೆದುಕೊಂಡು ಹೋಗಲಾಗುವುದು. ಕಲಬುರಗಿ ಬಂದ್ ಮಾಡಿ, ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಪ್ರಮುಖರಾದ ಅವ್ವಣ್ಣ ಪಾಟೀಲ್, ರವಿ ಡೊಂಗರಗಾAವ, ದೇವೇಂದ್ರ ಇತರರಿದ್ದರು.