ಜಿಲ್ಲೆ

ಕೊಪ್ಪ ಗ್ರಾ.ಪಂ. ಉಪಾಧ್ಯಕ್ಷರಾಗಿ ರುದ್ರೇಶ್‌ ಆಯ್ಕೆ

ಮದ್ದೂರು: ತಾಲೂಕಿನ ಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಪಿ.ರುದ್ರೇಶ್ ಅವಿರೋಧವಾಗಿ ಆಯ್ಕೆಯಾದರು.


ನವೀನ್‌ಕುಮಾರ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಪಿ.ರುದ್ರೇಶ್ ಹೊರತುಪಡಿಸಿ ಬೇರೆ ಯಾರೂ ನಾಮ ಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಬಿಇಒ ಸಿ.ಎಚ್.ಕಾಳೀರಯ್ಯ ವಿರೋಧ ಘೋಷಿಸಿದರು.


ನೂತನ ಉಪಾಧ್ಯಕ್ಷ ಪಿ.ರುದ್ರೇಶ್ ಮಾತನಾಡಿ, ಶಾಸಕ ಎನ್.ಚಲುವರಾಯಸ್ವಾಮಿ ಅವರ ಮಾರ್ಗದರ್ಶನ ಹಾಗೂ ಪಂಚಾಯಿತಿಯ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಉಮಾಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ, ಗ್ರಾ.ಪಂ. ಸದಸ್ಯರಾದ ನವೀನ್‌ಕುಮಾರ್, ಕವಿತಾ ದಿವಾಕರ್, ಕೆ.ಸಂತೋಷ್, ಜ್ಯೋತಿ, ಗಿರೀಶ್, ಯೋಗಾನಂದ, ಶಭಾನ, ಕುಮಾರ್ ಕೊಪ್ಪ, ಸಾವಿತ್ರಿ, ಪರ್ವಿಜ್, ವಿಜಯಕುಮಾರಿ, ಸುರೇಶ್, ಜೋಗಿಗೌಡ, ಜಯಲಕ್ಷ್ಮೀ, ಮಮತಾ, ನಾಗಮಂಗಲ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಪ್ಪ ಕೆ.ಎನ್.ದಿವಾಕರ್, ಸೇರಿದಂತೆ ಇತರರು ಇದ್ದರು.