ಹುಬ್ಬಳ್ಳಿ : ತಂದೆಯ ಕೊಲೆ ಸುಪಾರಿಯಿಂದ ಹತ್ಯೆಗೊಳಗಾಗಿದ್ದ ಅಖಿಲ್ ಜೈನ್ನ ಶವ ಕೊನೆಗೂ ಕಲಘಟಗಿ ತಾಲೂಕಿನ ದೇವಿಕೊಪ್ಪದ ಬಳಿಯ ನಿರ್ಮಾಣ ಹಂತದ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದೆ.
ಉದ್ಯಮಿ ಭರತ ಮಹಾಜನಶೇಠ್ (ಜೈನ್) ಎಂಬುವವರು ಹಳೇ ಹುಬ್ಬಳ್ಳಿಯ ಮೂವರಿಗೆ ತಮ್ಮ ಮಗ ಅಖಿಲ್ನ ಕೊಲೆಗೆ ಸುಪಾರಿ ನೀಡಿದ್ದರು. ಕೊಲೆಯ ನಂತರ ಮಗ ಕಾಣೆಯಾಗಿದ್ದಾನೆಂದು ತನ್ನ ಸಹೋದರನಿಂದ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪೊಲೀಸರ ವಿಚಾರಣೆ ನಂತರ ಭರತ ಮಹಾಜನಶೇಠ್ ತನ್ನ ಮಗನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದರ ಬಗ್ಗೆ ಬಾಯಿ ಬಿಟ್ಟಿದ್ದ. ಅಖಿಲ್ನ ಶವಕ್ಕಾಗಿ ಪೊಲೀಸರು ಕಳೆದ ಎರಡು ದಿನಗಳಿಂದ ಕಲಘಟಗಿ ತಾಲೂಕಿನ ದೇವರಗುಡಿಹಾಳದ ಕಬ್ಬಿನ ತೋಟ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದರೂ, ಶವ ಸಿಕ್ಕಿರಲಿಲ್ಲ. ಇದೀಗ, ಅಖಿಲ್ ಶವ ಪತ್ತೆಯಾಗಿದೆ.
ಇನಸ್ಪೆಕ್ಟರ್ ಜಗದೀಶ ಹಂಚಿನಾಳ ನೇತೃತ್ವದ ತಂಡ ಭರತ್ ಸೇರಿದಂತೆ ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.