ಜಿಲ್ಲೆ

ಕೊನ ಕಾರ್ಪಸ್ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯ

ಬಳ್ಳಾರಿ : ಪರಿಸರಕ್ಕೆ ಮಾರಕ ಮತ್ತು ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿರುವ ಕೊನ ಕಾರ್ಪಸ್ ಮರಗಳನ್ನು ಜಿಲ್ಲಾದ್ಯಂತ ಗಣನೀಯ ಸಂಖ್ಯೆಯಲ್ಲಿ ಬೆಳೆದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.
ಇತ್ತೀಚೆಗೆ ಜಿಲ್ಲೆಯಲ್ಲಿ ರಸ್ತೆಗಳ ಬದಿ, ಬಡಾವಣೆಗಳಲ್ಲಿ , ಕೈಗಾರಿಕೆಗಳ ಸುತ್ತಲೂ, ಗ್ರಂಥಾಲಯ, ಶಾಲಾ ಕಾಲೇಜುಗಳ ಮೈದಾನಗಳ ಆವರಣದಲ್ಲಿ ಹಾಗೂ ವಿವಿಧಡೆ ಹಸಿರು ಕಾಣುವ ಉದ್ದೇಶದಿಂದ ಕೊನ ಕಾರ್ಪಸ್ ಮರಗಳನ್ನು ಸಾರ್ವಜನಿಕರು ಬೆಳೆಸುತ್ತಿದ್ದಾರೆ. ಈ ಮರಗಳು ವೇಗವಾಗಿ ಬೆಳೆಯುವುದು ಅಲ್ಲದೆ, ಪರಿಸರಕ್ಕೂ ಹಾಗೂ ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಈ ಮರಗಳ ಈ ಹೂವುಗಳಿಂದ ಬರುವ ಪರಾಗವು ಚಳಿಗಾಲದಲ್ಲಿ ಮಾನವನ ಉಸಿರಾಟಕ್ಕೆ ತೊಂದರೆ, ಶೀತ, ಕೆಮ್ಮು, ಆಸ್ತಮಾ ಮತ್ತು ಅಲರ್ಜಿಗಳಿಗೆ ರೋಗ ಕಾಣಿಸಿಕೊಳ್ಳಬಹುದು. ಇದರಿಂದ ಸುತ್ತಲಿನ ಕೀಟಗಳು, ಪಕ್ಷಿ ಹಾಗೂ ಪ್ರಾಣಿಗಳ ಸಂಕುಲ ನಾಶವಾಗಬಹುದು. ಭೂಮಿಯಲ್ಲಿ ಬಿಡುವ ವಿಲಕ್ಷಣ ಈ ಮರದ ಬೇರುಗಳಿಂದ ದೂರ ಸಂಪರ್ಕದ ಕೇಬಲ್‌ಗಳು, ಚರಂಡಿಗಳು ಹಾಗೂ ಸಿಹಿ ನೀರಿನ ಪೈಪ್‌ಲೈನ್‌ಗಳಲ್ಲಿ ಹಾನಿಕಾರಕ ವಿಷ ಉತ್ಪತ್ತಿಯಾಗಲಿದೆ. ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಕುಸಿತವಾಗಲಿದೆ. ಆದ್ದರಿಂದ, ಈ ಮರಗಳು ಸುತ್ತಲೂ ಮೂಲ ಸೌಕರ್ಯಕ್ಕೆ ಅಪಾಯ ತರಲಿದೆ ಎಂದು ವೈಜ್ಞಾನಿಕವಾಗಿ ಸಾಬೀತು ಆಗಿದೆ.

ವಿವಿಧ ರಾಜ್ಯಗಳಲ್ಲಿ ನಿಷೇಧ : ಈಗಾಗಲೇ ತೆಲಂಗಾಣ, ಗುಜರಾತ್ ಹಾಗೂ ಆಸ್ಸಾಂ ರಾಜ್ಯಗಳಲ್ಲಿ ಬೆಳೆದಿದ್ದ ಕೊನ ಕಾರ್ಪಸ್ ಮರಗಳನ್ನು ಕೂಡಲೇ ತೆರವುಗೊಳಿಸಬೇಕು. ಅಲ್ಲದೆ, ಮುಂದೆ ಪ್ರದೇಶದಲ್ಲಿ ಈ ಮರಗಳನ್ನು ಬೆಳೆಯಬಾರದೆಂದು ಈ ಮೂರು ರಾಜ್ಯಗಳಲ್ಲಿ ಸರ್ಕಾರಗಳು ಆದೇಶ ನೀಡಿವೆ. ತೆಲಂಗಾಣ ರಾಜ್ಯದ ಕಾಕಿನಾಡ ಜಿಲ್ಲೆಯಲ್ಲಿ ಮಾತ್ರ 4,602 ಕೊನ ಕಾರ್ಪಸ್ ಮರಗಳು ಪತ್ತೆಯಾಗಿದ್ದು, ಅವೆಲ್ಲವೆನ್ನೂ ಕೆಲವೇ ದಿನಗಳಲ್ಲಿ ಕತ್ತರಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿಯವರೆಗೆ ಯಾವುದೆ ಆದೇಶ ಹೊರಡಿಸದೆ ಮೌನ ವಹಿಸಿರುವುದು ಸಾರ್ವಜನಿಕರಿಗೆ ಬೇಸರ ತರಿಸಿದೆ.

ಕ್ರಮ ವಹಿಸದ ಸರ್ಕಾರ : ಈಗಾಗಲೇ ನಗರದ ಸಿರಗುಪ್ಪ ರಸ್ತೆ, ಮೋಕಾ ರಸ್ತೆ, ಅನಂತಪುರ ರಸ್ತೆ, ಗ್ರಂಥಾಲಯ ಆವರಣ, ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಆವರಣ, ಹಳೆಯ, ನೂತನ ಬಡಾವಣೆಗಳಲ್ಲಿ , ತಾಲೂಕುಗಳು ಹಾಗೂ ಗ್ರಾಮೀಣ ಭಾಗದಲ್ಲಿ ವಿಪರೀತವಾಗಿ ಕೊನ ಕಾರ್ಪಸ್ ಮರಗಳನ್ನು ಬೆಳೆಯಲಾಗಿದೆ. ಪರಿಸರ ಹಾಗೂ ಆರೋಗ್ಯಕ್ಕೂ ಹಾನಿಯಾಗಲಿವೆ ಎಂಬುದು ಸರ್ಕಾರ ಹಾಗೂ ಅಧಿಕಾರಿಗಳು ಗಮನಕ್ಕೂ ಇದ್ದರೂ ಇಲ್ಲಿಯವರೆಗೆ ತೆರವುಗೊಳಿಸಲು ಕ್ರಮವಹಿಸದೆ ಇರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಕೆಲವೇ ದಿನಗಳಲ್ಲಿ ಚಳಿಗಾಲ ಆರಂಭವಾಗುವುದರಿಂದ ಶಾಲಾ ಕಾಲೇಜುಗಳಲ್ಲಿ ಮರಗಳು ಬೆಳೆಯುವುದರಿಂದ ಸಣ್ಣ ಸಣ್ಣ ಮಕ್ಕಳು ಹಾಗೂ ಹಿರಿಯರಿಗೆ ಕಾಯಿಲೆಗೆ ತುತ್ತಾದರೆ ಇದಕ್ಕೆ ಯಾರ ಹೊಣೆ ಎಂಬುದು ಪೋಷಕರ ಪ್ರಶ್ನೆಯಾಗಿದೆ. ಅಲ್ಲದೆ, ನಗರದ ಮುಖ್ಯ ರಸ್ತೆಗಳಲ್ಲಿ ಈ ಮರಗಳು ಹಾಕಿದರೂ ಕೂಡ, ಇದರ ಬಗ್ಗೆ ಇಲಾಖೆ ಗಮನಕ್ಕೆ ಇಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ಅಲ್ಲದೆ, ಎಲ್ಲ ಸಸಿಗಳಿಗಿಂತ ಕೊನ ಕಾರ್ಪಸ್ ಸಸಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಕೋಟ್…. ಜಿಲ್ಲೆಯ ಜಿಂದಾಲ್, ಕೈಗಾರಿಕಗಳ ಹಾಗೂ ತಾಲೂಕಿನ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊನ ಕಾರ್ಪಸ್ ಮರಗಳು ಬೆಳೆಯುತ್ತಿವೆ. ಮರಗಳನ್ನು ಕೂಡಲೇ ಅರಣ್ಯ ತೆರವುಗೊಳಿಸಲು ಕ್ರಮವಹಿಸಬೇಕು.

  • ಜೆ. ಎನ್. ಗಣೇಶ, ಶಾಸಕ, ಕಂಪ್ಲಿ.