ಚಿಕ್ಕೋಡಿ: ತಾಲೂಕಿನ ಕೊಥಳಿಯ ಶ್ರೀ ಶಾಂತಿಗಿರಿಯಲ್ಲಿ ಭಾರತ ಗೌರವ ಆಚಾರ್ಯ ದೇಶಭೂಷಣ ಮಹಾರಾಜರ ಹಾಗೂ ಆಚಾರ್ಯ ವರದ ಮುನಿಸಾಗರ ಮಹಾರಾಜರ ಪುಣ್ಯತಿಥಿ ಅಂಗವಾಗಿ ವಿನಯಾಂಜಲಿ ಕಾರ್ಯಕ್ರಮ ಹಾಗೂ ೧೦೦೮ ಶಾಂತಿನಾಥ ಭಗವಾನ, ೧೦೦೮ ಚಂದ್ರಪ್ರಭು ಭಗವಾನ ಹಾಗೂ ೧೦೦೮ ಮಹಾವೀರ ಭಗವಾನರ ಮಹಾಮಸ್ತಕಾಭಿಷೇಕ ಈಚೆಗೆ ಜರುಗಿತು.
ಆಚಾರ್ಯ ಶಾಂತಿಸೇನ ಮಹಾರಾಜ ಕೊಲ್ಲಾಪುರದ ಸ್ವಸ್ತಿಶ್ರೀ ಲಕ್ಷ್ಮೀ ಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಇತರ ಮುನಿಗಳು ಮತ್ತು ಮಾತಾಜಿಯವರ ಸಮ್ಮುಖದಲ್ಲಿ ಭಗವಾನರ ಜಲಾಭಿಷೇಕ, ದುಗ್ದಾಭಿಷೇಕ, ಪೀಠಾಭಿಷೇಕ, ಶ್ರೀಗಂಧ, ಕುಂಕುಮ ಅಭಿಷೇಕ ಹೀಗೆ ೯ ದ್ರವ್ಯಗಳಿಂದ ಮಸ್ತಕಾಭಿಷೇಕ ನೆರವೇರಿತು. ಸಮಿತಿ ವತಿಯಿಂದ ಧ್ವಜಾರೋಹಣ, ಮುನಿಗಳ ಭಾವಚಿತ್ರದ ಮೆರವಣಿಗೆ ಜರುಗಿತು.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮುಖಂಡ ಉತ್ತಮ ಪಾಟೀಲ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆನ್ನವರ, ಎಸ್. ಟಿ.ಮುನ್ನೋಳಿ, ಕಿರಣ ಪಾಟೀಲ, ದಿಂಗಬರ ಜೈನ ಶಾಂತಿಗಿರಿ ಟ್ರಸ್ಟ್ ಅಧ್ಯಕ್ಷ ಪದ್ಮಾಕರ ಪಾಟೀಲ, ಪಸಗೌಡ ಪಾಟೀಲ, ಸದಸ್ಯರಾದ ಸಾಹು ಜೈನ, ನೀತಿನ ಗಾಂಧಿ, ತಾತ್ಯಾಸಾಹೇಬ ಪಾಟೀಲ, ಅಣ್ಣಗೌಡ ಪಾಟೀಲ, ಬಾಳಗೌಡ ಪಾಟೀಲ, ಶ್ರೀಪಾಲ ಮುನ್ನೋಳಿ, ಭಾವುಸಾಹೇಬ ಪಾಟೀಲ, ಸಂದೀಪ ಪಾಟೀಲ, ತಾತ್ಯಾಸಾಹೇಬ ಖೋತ, ಬಾಹುಬಲಿ ಖೋತ ಇತರರಿದ್ದರು.