ಜಿಲ್ಲೆ

ಕೊಡೇಕಲ್‌ಗೂ ಕಪ್ಪಡಿ ಕ್ಷೇತ್ರಕ್ಕೂ ಅವಿನಾಭಾವ ಸಂಬAಧ

ಕೊಡೇಕಲ್ : ಕಾಲಜ್ಞಾನಿ ವಚನವನ್ನು ನಾಡಿಗೆ ಕೊಡುಗೆಯಾಗಿ ನೀಡಿರುವ ಕೊಡೇಕಲ್‌ಗೂ ಮತ್ತು ಕಪ್ಪಡಿ ಕ್ಷೇತ್ರಕ್ಕೂ ೫೦೦ ವರ್ಷಗಳ ಅವಿನಾಭಾವ ಸಂಬAಧವಿದ್ದು, ಇದನ್ನು ಇನ್ನಷ್ಟು ಗಟ್ಟಿಗೊಳಿಸೋಣ ಎಂದು ಮಂಡ್ಯ ಜಿಲ್ಲೆಯ ಶ್ರೀ ಮಂಟೇಸ್ವಾಮಿ ಹಾಗೂ ಕಪ್ಪಡಿ ರಾಚಪ್ಪಾಜಿ ಕ್ಷೇತ್ರಗಳ ಪೀಠಾಧಿಪತಿ ಶ್ರೀ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ಧಲಿAಗ ರಾಜೇ ಅರಸ್ ಹೇಳಿದರು.

ಕೊಡೇಕಲ್ ಕ್ಷೇತ್ರ ದರ್ಶನಕ್ಕಾಗಿ ಬುಧವಾರ ಆಗಮಿಸಿದ್ದ ಶ್ರೀಗಳು ಹಾಗೂ ಅವರ ಧರ್ಮಪತ್ನಿ ಮಾತೆ ಸುಷ್ಮಾವಾಣಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲಜ್ಞಾನಿ ವಚನ ಬರೆಯುವ ಮೂಲಕ ಹೆಸರಾಗಿರುವ ಕೊಡೇಕಲ್ ಗ್ರಾಮ ಒಂದು ಪುಣ್ಯಭೂಮಿಯಾಗಿದೆ. ಎರಡು ಕ್ಷೇತ್ರಗಳ ಪರಂಪರೆ ಒಂದೆಯಾಗಿವೆ. ಅದರಲ್ಲೂ ಕೊಡೇಕಲ್ ಬಸವಣ್ಣನವರ ಭಕ್ತರು ಮಂಟೇಸ್ವಾಮಿ ಹಾಗೂ ಕಪ್ಪಡಿ ಕ್ಷೇತ್ರಗಳ ನಡುವೆ ಬಾಂಧವ್ಯ ಬೆಸೆಯುವ ಕೊಂಡಿಗಳಾಗಿದ್ದಾರೆ ಎಂದು ಹೇಳಿದರು.

ವಚನಗಳನ್ನು ಪೂಜಿಸುವ ಇಲ್ಲಿನ ಸಂಪ್ರದಾಯ ಮತ್ತು ಪದ್ಧತಿ ನಾಡಿನಲ್ಲಿಯೇ ವಿಶೇಷವಾಗಿದೆ. ಲಿಂ. ಶ್ರೀ ವೀರಯ್ಯ ಅಪ್ಪನವರ ಪ್ರತಿರೂಪದಂತಿರುವ ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪನ ಅವರಿಂದ ಹಲವು ಅಭಿವೃದ್ಧಿ ಕರ‍್ಯ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀಕಂಠಸಿದ್ಧಲಿAಗ ರಾಜೇ ಅರಸ್ ಮತ್ತು ಮಾತೆ ಸುಷ್ಮಾವಾಣಿ ಅವರನ್ನು ವೃಷಭೇಂದ್ರ ಅಪ್ಪ ಸನ್ಮಾನಿಸಿ ಗೌರವಿಸಿದರು. ಬಸವಣ್ಣನ ದರ್ಶನ ಪಡೆದ ಪೂಜ್ಯರನ್ನು ಮುತ್ತೆÊದೆಯರು ಆರತಿ ಮಾಡುವ ಮೂಲಕ ಬರಮಾಡಿಕೊಂಡರು.

ಬಸವ ಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ, ರಾಜ ಮನೆತನದ ರಾಜಾ ಜಿತೇಂದ್ರನಾಯಕ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಮಾತೆ ಸುಷ್ಮಾವಾಣಿ ಬುದ್ಧಿ, ರಾಜಾ ವೆಂಕಟಪ್ಪನಾಯಕ ಜಹಾಗೀರದಾರ, ಡಾ.ಎಂ.ಆರ್.ಇಟಗಿ, ಬಸವರಾಜ ಅಂಗಡಿ ಇತರರಿದ್ದರು.
ಬಸವರಾಜ ಭದ್ರಗೋಳ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಬಂಟನೂರ, ಗುರುರಾಜ, ಬಸವರಾಜ ಪತ್ತಾರ ಸಂಗೀತ ಸೇವೆ ನಡೆಸಿಕೊಟ್ಟರು. ಶಾಮಸುಂದರ ಜೋಶಿ ಸ್ವಾಗತಿಸಿದರು. ಕೋರಿ ಸಂಗಯ್ಯ ಗಡ್ಡ ನಿರೂಪಣೆ ಮಾಡಿ, ವಂದಿಸಿದರು.