ಗೋಣಿಕೊಪ್ಪ: ಕೊಡವ ಜನಾಂಗದ ಏಳಿಗೆ ಮತ್ತು ಸಂರಕ್ಷಣೆಗೆ ಒತ್ತು ನೀಡುವ ಉದ್ದೇಶದಿಂದ ಇನ್ನಷ್ಟು ತೊಡಗಿಸಿಕೊಳ್ಳಲು ಜನಾಂಗದ ಮಹಿಳೆಯರನ್ನು ಸಂಘಟಿಸುವ ನಿಟ್ಟಿನಲ್ಲಿ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಡಿಯಲ್ಲಿ ನೂತನವಾಗಿ ಪೊಮ್ಮಕ್ಕಡ ಕೂಟ ಸ್ಥಾಪನೆ ಮಾಡಲಾಗಿದೆ.
ನೂತನ ಸಂಸ್ಥೆಯ ಅಧ್ಯಕ್ಷೆಯಾಗಿ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಉಪಾಧ್ಯಕ್ಷೆಯಾಗಿ ಮನ್ನೆರ ಸರು ರಮೇಶ್, ಕಾರ್ಯದರ್ಶಿಯಾಗಿ ಕಳ್ಳಿಚಂಡ ದೀನಾ ಉತ್ತಪ್ಪ ಅವರನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ಕೊಡವ ಸಮಾಜದ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊಮ್ಮಕ್ಕಡ ಕೂಟವನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಾಂಸ್ಕೃತಿಕ ಸಮಿತಿ ಸಂಚಾಲಕಿಯಾಗಿ ಕೋಟ್ರಮಾಡ ಶೈಮ ತಮ್ಮಯ್ಯ, ಮನ್ನೆರ ದೇವಿಕಾ ದೇವಯ್ಯ, ಕ್ರೀಡಾ ಸಂಚಾಲಕಿಯಾಗಿ ತಡಿಯಂಗಡ ಗಾನ ಸೋಮಣ್ಣ, ನಿರ್ದೇಶಕರಾಗಿ ಅಪ್ಪಚಂಗಡ ಲಲಿತಾ ಮೋಟಯ್ಯ, ಕೋಟ್ರಮಾಡ ರಾಣಿ ದೇವಯ್ಯ, ಮಚ್ಚಮಾಡ ರೋಜಿ ಸುಮಂತ್, ಕಳ್ಳಿಚಂಡ ದೇವಿಕಾ ನಂಜಪ್ಪ, ಚೆಟ್ಟಂಗಡ ಪಿಂಕಿ ವಸಂತ್, ಚೊಟ್ಟೆಯಾಂಡಮಾಡ ಜಯಶ್ರೀ ಅಪ್ಪಣ್ಣ, ಮನ್ನೆರ ಕಾವೇರಮ್ಮ ಅಜಿತ್, ಬೊಳ್ಳಾಜಿರ ಸುಶೀಲಾ ಅಶೋಕ್, ಅಜ್ಜಮಾಡ ಪ್ರಮೀಳಾ ಕರುಂಬಯ್ಯ ಅವರನ್ನು ಆಯ್ಕೆ ಮಾಡಲಾಯಿತು.
ಸಮಾಜದ ಅಧ್ಯಕ್ಷ ಹರೀಶ್ ಅಪ್ಪಯ್ಯ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ಜನಾಂಗದ ಬೆಳವಣಿಗೆ ಹಾಗೂ ಸಂರಕ್ಷಣೆ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ. ಒಬ್ಬರಿಂದ ಸಾಧ್ಯವಾಗದೆ ಇರುವುದು ಹಲವರು ಜತೆ ಸೇರಿದಾಗ ಸಾಧ್ಯವಿದೆ. ಕೊಡವ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಗಮನಹರಿಸುವುದರೊಂದಿಗೆ ಆರೋಗ್ಯ ಶಿಬಿರ ಸೇರಿದಂತೆ ವಿವಿಧ ಶಿಬಿರ ಆಯೋಜನೆ ಮಾಡಿ, ಸಮಾಜಕ್ಕೆ ಅನುಕೂಲ ಕಲ್ಪಿಸಲು ಸಾಧ್ಯವಿದೆ ಎಂದರು.
ಸಮಾಜದ ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಮಾತನಾಡಿ, ಚಿಕ್ಕ ವಯಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಯಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಪ್ರಭಾವ ಹೆಚ್ಚಿದೆ. ಕೊಡವ ಜಾನಪದ ಕಲೆ ಕಲಿಕೆ, ಹಬ್ಬಗಳ ಆಚರಣೆಗಳ ಮಹತ್ವಗಳ ಬಗ್ಗೆ ಅರಿವು ಮೂಡಿಸಲು ಹಾಗೂ ಮಹಿಳೆಯರ ಮೂಲಕ ಜನಾಂಗದಲ್ಲಿ ಪರಿವರ್ತನೆ ತರಲು ಮಹಿಳೆಯರ ಸಂಘಟಿತರಾಗಿ ಚಿಂತಿಸಲು ಇಂತಹ ವೇದಿಕೆ ಅಗತ್ಯ ಎಂದರು.
ಸಮಾಜದ ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ನಿರ್ದೇಶಕರಾದ ಚಂಗುಲಂಡ ಅಶ್ವಿನಿ ಸತೀಶ್, ತೀತಿರ ಅನಿತಾ ಸುಬ್ಬಯ್ಯ, ತಡಿಯಂಗಡ ಸೌಮ್ಯಾ ಕರುಂಬಯ್ಯ, ಕರ್ನಂಡ ರೂಪಾ ದೇವಯ್ಯ ಸೇರಿದಂತೆ ಪೊಮ್ಮಕ್ಕಡ ಕೂಟದ 50ಕ್ಕೂ ಅಧಿಕ ಸದಸ್ಯರು ಪಾಲ್ಗೊಂಡಿದ್ದರು.