ಜಿಲ್ಲೆ

ಕೊಡಗು ವಿವಿ ಒಡಂಬಡಿಕೆಗೆ ಸಹಿ


  • ಕೊಡಗು : ಕೊಡಗು ವಿಶ್ವವಿದ್ಯಾಲಯ, ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆ ಜತೆಗೆ ಇತ್ತೀಚೆಗೆ ಒಡಂಬಡಿಕೆ ಮಾಡಿಕೊಂಡಿದೆ.

  • ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ನಿರ್ವಹಣೆ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ತರಬೇತಿಯಲ್ಲಿ ಆ ಸಂಸ್ಥೆಯ ಮಹಾ ನಿರ್ದೇಶಕ ಡಾ.ಪಿ.ಚಂದ್ರಶೇಖರ್ ಮತ್ತು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂ.ಆಲೂರ ಸಹಿ ಮಾಡಿದರು.

  • ಜಂಟಿಯಾಗಿ ಸಂಶೋಧನಾ ಚಟುವಟಿಕೆ ಮಾಡುವುದು, ಯೋಜನೆಗಳನ್ನು ಏರ್ಪಡಿಸುವುದು, ಸಮ್ಮೇಳನ, ಕಾರ್ಯಗಾರಗಳನ್ನು ಹಮ್ಮಿಕೊಳ್ಳುವುದು, ವಿಷಯಾಧಾರಿತ ಅಧ್ಯಯನ ಅಭಿವೃದ್ಧಿಪಡಿಸುವುದು, ಜನತೆಗೆ ಪೂರಕವಾಗುವಂತಹ ಅಧ್ಯಯನಗಳನ್ನು ಕೈಗೊಳ್ಳುವುದು ಸೇರಿದಂತೆ ಇತರ ವಿಷಯಗಳ ಕುರಿತಾಗಿ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.