ಜಿಲ್ಲೆ

ಕೊಡಗಿನಲ್ಲಿ ಕಾಡಾನೆ ಸೆರೆ

ಮಡಿಕೇರಿ: ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೊಸಕೋಟೆಯಲ್ಲಿ ಶನಿವಾರ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಫಲವಾಗಿದೆ. ಉಪಟಳ ನೀಡುತ್ತಿದ್ದ ಕಾಡಾನೆ ಸೆರೆಹಿಡಿಯಲು ಅನುಮತಿ ನೀಡಲಾಗಿತ್ತು. ಮೂರು ದಿನ ನಡೆದ ಕಾರ್ಯಾಚರಣೆಯಲ್ಲಿ ಶನಿವಾರ ಸಫಲವಾಯಿತು.

ಕಾಡಾನೆ ಸೆರೆಗೆ ಅನುಮತಿ ನೀಡುವ ವೇಳೆ ರೇಡಿಯೋ ಕಾಲರ್ ಅಳವಡಿಕೆಗೆ ನೀಡಿದ್ದ ಆದೇಶದನ್ವಯ ರೇಡಿಯೋ ಕಾಲರ್ ಅಳವಡಿಸಲಾಯಿತು. ಲಾರಿಯಲ್ಲಿ ಬಂಡೀಪುರ ಅರಣ್ಯಕ್ಕೆ ಸಾಗಿಸಲಾಯಿತು. ಮೂರು ದಿನದ ಕಾರ್ಯಾಚರಣೆಯಲ್ಲಿ ಐದು ಸಾಕಾನೆಗಳು ಪಾಲ್ಗೊಂಡಿದ್ದವು. ಕೊಕ್ಕಂಡ ಕುಟುಂಬಸ್ಥರ ಕಾಫಿ ತೋಟದಲ್ಲಿದ್ದ ಕಾಡಾನೆಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಯಿತು. ಪಶುವೈದ್ಯ ಡಾ.ಮುಜಿಬ್ ರೆಹಮಾನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.