ಮೈಸೂರು: ಮೈಸೂರು ತಾಲೂಕಿನ ಜಯಪುರದಲ್ಲಿ ಕೊಟ್ಟಿಗೆ ಬೀಗ ಮುರಿದು ಕಳ್ಳರಿಬ್ಬರು 4 ಮೇಕೆಗಳನ್ನು ಬೈಕ್‌ನಲ್ಲಿ ಕದ್ದೊಯ್ದಿದ್ದಾರೆ.
ಜವನೇಗೌಡ ಅವರ ಪತ್ನಿ ಹಾಗೂ ಪುತ್ರ ಜಾನುವಾರುಗಳನ್ನು ಮೇಯಿಸಿಕೊಂಡು ಮನೆ ಪಕ್ಕದ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದರು. ಬೆಳಗ್ಗೆ ಕೊಟ್ಟಿಗೆಗೆ ಹೋದಾಗ ಬಾಗಿಲಿನ ಬೀಗ ಒಡೆದಿತ್ತು.
ಒಳಹೋಗಿ ನೋಡಿದಾಗ ಹಸು-ಕರುಗಳಿದ್ದವು. ಆದರೆ ನಾಲ್ಕು ಮೇಕೆಗಳು ನಾಪತ್ತೆಯಾಗಿದ್ದವು. ಸಮೀಪದಲ್ಲಿರುವ ಅಂಗಡಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ಯಾರೋ ಇಬ್ಬರು ಖದೀಮರು, ತಡರಾತ್ರಿ ಬೈಕ್‌ನಲ್ಲಿ ಮೇಕೆಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಜಯಪುರ ಪೊಲೀಸರು, ಕಳ್ಳರ ಪತ್ತೆಗೆ ಶೋಧ ನಡೆಸಿದ್ದಾರೆ.