ಯಳಂದೂರು ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಸಿದ್ದರಾಜು ಅವರ 2 ಎತ್ತುಗಳು ಅಗ್ನಿ ಅನಾಹುತಕ್ಕೆ ಬಲಿಯಾಗಿರುವುದು. 
ಜಿಲ್ಲೆ

ಕೊಟ್ಟಿಗೆಗೆ ಬೆಂಕಿ ಬಿದ್ದು ಎತ್ತುಗಳ ಸಾವು

Chamarajanagar

ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಭಾನುವಾರ ಮಧ್ಯರಾತ್ರಿ ಬೆಂಕಿ ತಗುಲಿ ಹೊತ್ತಿ ಉರಿದ ಕೊಟ್ಟಿಗೆಯಲ್ಲಿ ಎರಡು ಎತ್ತುಗಳು ಮೃತಪಟ್ಟಿವೆ.

ಗ್ರಾಮದ ಉಪ್ಪಾರ ಬಡಾವಣೆ ನಿವಾಸಿ ಸಿದ್ದರಾಜು ಅವರು ಕೊಟ್ಟಿಗೆ ಬಳಿಯಲ್ಲೇ ಹುಲ್ಲಿನ ಬಣವೆಯನ್ನು ಹಾಕಿದ್ದರು. ಹುಲ್ಲಿನ ಬಣವೆಗೆ ಬಿದ್ದ ಬೆಂಕಿ ಕೊಟ್ಟಿಗೆಗೂ ತಗುಲಿದೆ. ಬೆಂಕಿಯ ಕೆನ್ನಾಲಿಗೆಯಿಂದ ಕೊಟ್ಟಿಗೆಗೆ ತೆರಳಲು ಸಾಧ್ಯವಾಗದ ಕಾರಣ ಎತ್ತುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ಕೊಟ್ಟಿಗೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ತಗಲುವುದನ್ನು ಅಗ್ನಿ ಶಾಮಕ ಸಿಬ್ಬಂದಿ ನಂದಿಸಿದರು.

ಎತ್ತುಗಳನ್ನೇ ನಂಬಿಕೊಂಡಿದ್ದ ಸಿದ್ದರಾಜು ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಎತ್ತುಗಳು, ಕೊಟ್ಟಿಗೆ, ಹುಲ್ಲಿನ ಬಣವೆ ಹಾನಿಯಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುಗಂಧರಾಜನ್ ಭೇಟಿ ನೀಡಿ, ಮರಣೋತ್ತರ ಪರೀಕ್ಷೆ ನಡೆಸಿದರು.