ಕೊಳ್ಳೇಗಾಲದ ಉಪ್ಪಾರಮೋಳೆ ಬಡಾವಣೆಯಲ್ಲಿ ಮಾ.13 ಹಾಗೂ 14 ರಂದು ನಡೆಯಲಿರುವ ಕೊಂಡೋತ್ಸವಕ್ಕೆ ನಿವಾಸಿಗಳು ಎತ್ತಿನಗಾಡಿಗಳಲ್ಲಿ ಮರದ ಕಟ್ಟಿಗೆಗಳನ್ನು ಸಾಗಿಸುತ್ತಿರುವುದು. 
ಜಿಲ್ಲೆ

ಕೊಂಡೋತ್ಸವಕ್ಕೆ ಮೆರವಣಿಗೆ ಮೂಲಕ ಸೌದೆ ಸಾಗಣೆ

ಕೊಳ್ಳೇಗಾಲ: ಪಟ್ಟಣದ ಉಪ್ಪಾರ ಮೋಳೆ ಬಡಾವಣೆಯಲ್ಲಿ ಮಾ.13, 14ರಂದು ನಡೆಯಲಿರುವ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವಕ್ಕೆ ನಿವಾಸಿಗಳು ಮೆರವಣಿಗೆ ಮೂಲಕ ಸೌದೆ ಸಾಗಿಸಿದರು.

ಶುಕ್ರವಾರ ಕಾವೇರಿ ನದಿಗೆ ತೆರಳುವ ರಸ್ತೆಯಲ್ಲಿರುವ ಶ್ರೀ ಸಿದ್ದಮ್ಮ ಮಠದಲ್ಲಿ ನೂರಾರು ಸಂಖ್ಯೆಯಲ್ಲಿ ಸಮಾವೇಶಗೊಂಡ ನಿವಾಸಿಗಳು ಕೊಂಡೋತ್ಸವಕ್ಕೆ ಬೇಕಾದ ಹುಣಸೆ ಹಾಗೂ ಗೊಬ್ಬಳಿ ಮರದ ತುಂಡುಗಳಿಗೆ ಪೂಜೆ ಸಲ್ಲಿಸಿ ಬಡಾವಣೆಗೆ ಕೊಂಡೊಯ್ದರು.

ಈ ವೇಳೆ ಬಣ್ಣದ ಓಕುಳಿ ಆಡುವ ಮೂಲಕ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. 25 ಎತ್ತಿನಗಾಡಿ ಹಾಗೂ 4 ಟ್ರಾೃಕ್ಟರ್‌ಗಳಲ್ಲಿ ಕೊಂಡದ ಸೌದೆ ತುಂಬಿಕೊಂಡು ಬಡಾವಣೆಯ ಮಧ್ಯ ಭಾಗದಲ್ಲಿರುವ ಕೊಂಡದ ಮಾಳಕ್ಕೆ ಸಾಗಿಸಿದರು.