ನಾಪೋಕ್ಲು: ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಮಂಗಳವಾರದ ಪಂದ್ಯಗಳಲ್ಲಿ ಕೊಂಗೇಟಿರ, ಚೊಟ್ಟೆಯಂಡಮಾಡ, ಚೀಯಕಪೂವಂಡ, ಪಟ್ಟಮಾಡ, ನೆಲ್ಲಮಕ್ಕಡ, ಚೇಂದಿರ, ಮಂಡೆಪಂಡ, ಚೌರೀರ(ಹೊದ್ದೂರು), ಕರಿನೆರವಂಡ, ಐಚಂಡ, ಬೊಳ್ಳೆಪಂಡ, ಕೋಟೆರ, ಶಾಂತೆಯಂಡ, ಕೊಲ್ಲಿರ, ಚಂದೂರ ತಂಡಗಳು ಗೆಲುವು ಸಾಧಿಸಿದವು.
ಮೈದಾನ ಒಂದರಲ್ಲಿ ಕೊಂಗೆಟಿರ ತಂಡವು ಐತಿಚಂಡ ತಂಡದ ವಿರುದ್ಧ 4-2 ಅಂತರದ ಜಯ ಸಾಧಿಸಿತು. ಚೊಟ್ಟೆಯಂಡಮಾಡ ಮೊಳ್ಳೆರ ತಂಡದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಚೀಯಕಪೂವಂಡ ತಂಡವು ಮುಕ್ಕಾಟಿರ (ಬೋಂದ) ತಂಡದ ವಿರುದ್ಧ 4-1 ಅಂತರದ ಜಯ ಗಳಿಸಿತು. ನೆಲ್ಲಮಕ್ಕಡ ತಂಡವು ಅಪ್ಪಟ್ಟಿರ ತಂಡದ ವಿರುದ್ಧ 6-0 ಅಂತರದಿಂದ ಗೆಲುವು ಸಾಧಿಸಿದರೆ ಮಾಚಮಾಡ ತಂಡದ ವಿರುದ್ಧ ಪಟ್ಟಮಾಡ ಜಯ ಸಾಧಿಸಿತು. ಚೇಂದಿರ ತಂಡಕ್ಕೆ ಕಾಂಡೇರ ತಂಡದ ವಿರುದ್ಧ 3-0 ಜಯ ಲಭಿಸಿತು. ಮಂಡೇಪಂಡ ತಂಡವು ಕೇಚೆಟ್ಟಿರ ತಂಡದ ವಿರುದ್ಧ 4-1 ಅಂತರದ ಗೆಲುವು ಸಾಧಿಸಿತು. ಅಂತಾರಾಷ್ಟ್ರೀಯ ಆಟಗಾರ ಕೆಚೆಟ್ಟಿರ ವಿಜಯ್ ಉತ್ತಯ್ಯ ತಂಡದ ಪರವಾಗಿ ಆಡಿದರು. ಕುಲ್ಲೇಟಿರ ತಂಡವು ಉದ್ದಪಂಡ ವಿರುದ್ಧ 3-1 ಅಂತರದ ಗೆಲುವು ಸಾಧಿಸಿದರೆ, ಚೌರಿರ (ಹೊದ್ದೂರು) ತಂಡವು ಸಣ್ಣುವಂಡ ತಂಡದ ವಿರುದ್ಧ 4-0 ಗೆಲುವು ಸಾಧಿಸಿತು. ಕರಿನೆರವಂಡ ತಂಡದವರು ಭರ್ಜರಿ ಎಂಟು ಗೋಲು ಗಳಿಸಿದರು. ತಂಡದ ವಿರುದ್ಧ ಆಡಿದ ಕೊಲ್ಲೀರ ತಂಡ ಯಾವುದೇ ಗೋಲು ಗಳಿಸಲಿಲ್ಲ. ಐಚಂಡವು ಜಮ್ಮಡ ವಿರುದ್ಧ 1-0 ಅಂತರದ ಗೆಲುವು ಸಾಧಿಸಿತು. ಬೊಳ್ಳೆಪಂಡ, ಪಾಲಕಂಡ ವಿರುದ್ಧ 5-1 ಅಂತರದ ಜಯ ಸಾಧಿಸಿತು.
ಬೊಳ್ಳೆ ಪಂಡ ತಂಡದ ಭಾರತ ಹಾಕಿ ತರಬೇತುದಾರ ಬೊಳ್ಳೆಪಂಡ ಕಾರಿಯಪ್ಪ ತಂಡದ ಪರವಾಗಿ ಆಡಿದರು. ಮುಂದಿನ ಪಂದ್ಯಗಳಲ್ಲಿ ಕೋಟೆರ ತಂಡ ಅವರೇಮಾದಂಡ ತಂಡದ ವಿರುದ್ಧ 4-1 ಅಂತರದ ಗೆಲುವು ಸಾಧಿಸಿತು. ಶಾಂತೆಯೆಂಡ ತಂಡ ಮಾಚೆಟ್ಟಿರ ತಂಡದ ವಿರುದ್ಧ 4-0 ಅಂತರದ ಗೆಲುವು ಸಾಧಿಸಿದರೆ ಕೊಲ್ಳಿರ ನೆಪರ್ಂಡ ವಿರುದ್ಧ 4-0 ಅಂತರದ ಗೆಲುವು ಸಾಧಿಸಿತು ಚಂದುರತಂಡವು ತಂಡ ಪೊನ್ನೋಲತಂಡ ತಂಡದ ವಿರುದ್ಧ 4-0 ಅಂತರದ ಗೆಲುವು ಸಾಧಿಸಿತು.
ಬೊಳ್ಯಪಂಡ ಜೆ.ಕಾರ್ಯಪ್ಪ ಅಂತಾರಾಷ್ಟ್ರೀಯ ಹಾಕಿ ತರಬೇತುದಾರ, ಅಂತಾರಾಷ್ಟ್ರೀಯ ಹಾಕಿ ಆಟಗಾರರಾದ ಕುಲ್ಲೇಟಿರ ಎಸ್.ಉತ್ತಯ್ಯ, ಕೊಂಗೇಟಿರ ನೀಲೇಶ್, ಕೆಚೇಟ್ಟಿರ ವಿಜಯ್ ಉತ್ತಯ್ಯ, ಅಂತಾರಾಷ್ಟ್ರೀಯ ಕ್ರೀಡಾಪಟು ಕೆಚೇಟ್ಟಿರ ರೇಶ್ಮ ತಮ್ಮ ತಮ್ಮ ತಂಡದ ಪರವಾಗಿ ಆಡಿದರು.