ಜಿಲ್ಲೆ

ಕೈವಾರ ತಾತಯ್ಯನವರ ಜಯಂತ್ಯುತ್ಸ ಆಚರಣೆ

ಕೊಳ್ಳೇಗಾಲ: ಪಟ್ಟಣದ ಬಳೇಪೇಟೆಯಲ್ಲಿ ಶ್ರೀ ಕೈವಾರ ತಾತಯ್ಯನವರ ಜಯಂತ್ಯುತ್ಸವವನ್ನು ಭಾನುವಾರ ಆಚರಿಸಲಾಯಿತು.

ಶ್ರೀ ಬಲಿಜ ಜನಾಂಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿ ಮಾತನಾಡಿ, ಕೈವಾರ ತಾತಯ್ಯರವರ ತತ್ವ, ಸಿದ್ಧಾಂತಗಳು ಮಾನವ ಒಳಿತಿಗಾಗಿ ಬಿಟ್ಟು ಹೋದ ಅವರ ಚಿಂತನೆಗಳು ನಮಗೆ ಆದರ್ಶಪ್ರಾಯವಾಗಿವೆ. ಜಿಡ್ಡು ಹಿಡಿದ ಸಮಾಜವನ್ನು ತಿದ್ದಿ ತೀಡಿ ಶುದ್ಧಗೊಳಿಸಿ ಲೋಕಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ಧಾರೆ ಎರೆದಿದ್ದಾರೆ. ಸಮ ಸಮಾಜವನ್ನು ನಿರ್ಮಿಸಿ ಎಲ್ಲ ಮಾನವ ಕುಲ ಒಂದೇ ಎಂದು ಪ್ರತಿಪಾದಿಸಿದ ಮಹಾನ ದಾರ್ಶನಿಕರಾಗಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವು ಸಾಗಬೇಕು ಎಂದು ತಿಳಿಸಿದರು.

ಬಲಿಜ ಕುಲಬಾಂಧವರ ಸಂಘದ ಅಧ್ಯಕ್ಷ ಉದಯ ಕುಮಾರ್, ವೆಂಕಟೇಶ್, ಗಿರೀಶ್ ಬಾಬು, ನಗರಸಭೆ ಸದಸ್ಯ ಪರಮೇಶ್ವರಯ್ಯ, ಬಿಜೆಪಿ ಮುಖಂಡ ಚಿಕ್ಕಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಮತ್ತಿತರಿದ್ದರು.