ಚಿಂತಾಮಣಿ: ಸದ್ಗುರು ಕೈವಾರದ ಯೋಗಿ ನಾರೇಯಣ ಯತೀಂದ್ರ ತಾತಯ್ಯನವರ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ತಾತಯ್ಯನವರ ಮೂಲ ಬೃಂದಾವನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು, ಸದ್ಗುರುಗಳ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷದೊಂದಿಗೆ ಅಷ್ಟಾವಧಾನ ಸೇವೆ ನೆರವೇರಿಸಲಾಯಿತು, ಪೂಜಾ ಕೈಂಕರ್ಯದಲ್ಲಿ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ದಂಪತಿ ಉಪಸ್ಥಿತರಿದ್ದರು.
ಪೂಜೆ ನಂತರ ಅಲಂಕೃತ ಪಲ್ಲಕ್ಕಿಯಲ್ಲಿ ಸದ್ಗುರು ಉತ್ಸವ ವಿಗ್ರಹವನ್ನು ರಥಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ಭಕ್ತರು ಬಾಳೆಹಣ್ಣು ,ದವನ ಎಸೆದು ಹರಕೆ ತೀರಿಸಿದರು.
ಮಠದ ಸಂಕೀರ್ತನಾ ಯೋಜನೆ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್, ಮಠದ ಟ್ರಸ್ಟ್ ಸಮಿತಿ ಸದಸ್ಯರು, ಕೈವಾರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು.
ನಾದಸುಧಾರಸ ಸಾಂಸ್ಕೃತಿಕ ವೇದಿಕೆಯಲ್ಲಿ ರಥೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ನಡೆದವು, ಕೋಲಾರದ ಮಂಜುಳಾ ಭಾಗವತಾರಿಣಿ ತಂಡ ಹಾಗೂ ಕದರಿಯ ದಸ್ತಗೀರ್ ಸಾಬ್ ತಂಡದಿಂದ ಹರಿಕಥೆ ನಡೆಯಿತು.