ಜಿಲ್ಲೆ

ಕೈಮಗ್ಗ ಮೇಳದಲ್ಲಿ 62 ಲಕ್ಷ ರೂ.ವ್ಯಾಪಾರ,ವಹಿವಾಟು

ವಿಜಯವಾಣಿ ಸುದ್ದಿಜಾಲ ಧಾರವಾಡ

ಕೈ ಮಗ್ಗ ಮೇಳವು ರಾಜ್ಯ ಹಾಗ ಹೊರ ರಾಜ್ಯಗಳ ವೈವಿಧ್ಯಮಯ ಉತ್ಪನ್ನಗಳಿಂದ ಹು-ಧಾ ಜನತೆಯನ್ನು ಆಕರ್ಷಿಸುತ್ತಿದೆ. ನ. 1ರಿಂದ ಆರಂಭವಾದ ಮೇಳವು ನ. 14ರವರೆಗೆ ನಡೆಯಲಿದ್ದು, ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮೇಳದಲ್ಲಿ ಈವರೆಗೆ ಒಟ್ಟು 62,33,245 ರೂ. ವಹಿವಾಟು ಆಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ನಗರದ ಇನ್​ಸ್ಟಿಟ್ಯೂಟ್​ ಆಫ್ ಇಂಜಿನಿಯರ್ಸ್ ಆವರಣದಲ್ಲಿ ಭಾರತ ಸರ್ಕಾರದ ಜವಳಿ ಮಂತ್ರಾಲಯ ಹಾಗೂ ಜವಳಿ ಹಾಗೂ ಕೈ ಮಗ್ಗ ಇಲಾಖೆಯಿಂದ ಏರ್ಪಡಿಸಿರುವ ಹಾತ್​ ಕರ್ಗಾ ಕೈಮಗ್ಗ ಮೇಳಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

ಮೇಳದಲ್ಲಿ ಹರಿಯಾಣ, ಆಂಧ್ರಪ್ರದೇಶ, ಜಮ್ಮು ಕಾಶ್ಮೀರ, ಮಹಾರಾಷ್ಟ್ರ, ರಾಜಸ್ಥಾನ, ಪಶ್ಚಿಮಬಂಗಾಳ, ಜಾರ್ಖಂಡ ಮತ್ತು ಬಿಹಾರ ಸೇರಿ 9 ರಾಜ್ಯಗಳಿಂದ 29 ಕೈ ಮಗ್ಗ ಸಹಕಾರ ಸಂಘಗಳು ಹಾಗೂ ವೈಯಕ್ತಿಕ ನೇಕಾರರು, ರಾಜ್ಯದ ವಿವಿಧ ಜಿಲ್ಲೆಗಳಿಂದ 31 ಕೈ ಮಗ್ಗ ಸಹಕಾರ ಸಂಘಗಳು ಭಾಗವಹಿಸಿದ್ದಾರೆ ಎಂದರು.

ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಸೈಯದ ನಯೀಂ, ಜವಳಿ ಪ್ರವರ್ತನಾಧಿಕಾರಿ ಅಶೋಕ ಸುರಪುರ, ಪ್ರಮೊದ ವೈದ್ಯ, ಇತರರು ಇದ್ದರು.