ಹುಲಸೂರಿನ ಮಾಚನಾಳ ರಸ್ತೆ ಬದಿಯಲ್ಲಿ ದುರಸ್ತಿಯಾಗದ ಕೊಳವೆ ಬಾವಿ. 
ಜಿಲ್ಲೆ

ಕೈಪಂಪು ದುರಸ್ತಿಗೆ ಸಾರ್ವಜನಿಕರ ಒತ್ತಾಯ

ಹುಲಸೂರು: ಪಟ್ಟಣದ ಮಾಚನಾಳ ರಸ್ತೆ ಬದಿ ಇರುವ ಕೈಪಂಪು (ಕೊಳವೆ ಬಾವಿ) ಕೆಟ್ಟು ಸುಮಾರು ದಿನ ಕಳೆದರೂ ಸಹ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ದುರಸ್ತಿ ಕಾಣದೆ ಅನಾಥವಾಗಿದೆ.

ಪಟ್ಟಣದ ದುರ್ಗಾ ನಗರ, ಗಣೇಶ ನಗರ, ಕನ್ನಾಡೆ ಬಡಾವಣೆಗಳ ಸಾರ್ವಜನಿಕರು ಕುಡಿಯವ ನೀರಿಗಾಗಿ ಈ ಕೈಪಂಪನ್ನೇ ಅವಲಂಬಿಸಿದ್ದಾರೆ. ಆದರೆ ಕೆಟ್ಟು ಹೋಗಿ ತಿಂಗಳಾದರೂ ಸಹ ಸ್ಥಳೀಯ ಅಧಿಕಾರಿಗಳು ಅದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ಹಾಗೆ ರಿಪೇರಿ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.

ಈ ಬಗ್ಗೆ ಸಾಕಷ್ಟು ಬಾರಿ ಮನವರಿಕೆ ಮಾಡಿದರೂ ಸಹ ವಿನಾಕಾರಣ ದಿನ ದುಡುತ್ತಿದ್ದಾರೆ. ಇವಾಗ ಬೇಸಿಗೆ ಪ್ರಾರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೈಪಂಪು ಬೇಗನೆ ರಿಪೇರಿ ಮಾಡಬೇಕು ಎಂದು ಪ್ರಮುಖರಾದ ಸಿದ್ದರಾಮ ಬೀರಗೆ, ಅಬ್ಜಲಮಿಯಾ ವಾಹಬ್‌ಮಿಯಾ, ಮಲ್ಲಿಕಾರ್ಜುನ ಗೋರಟೆ, ಚಂದ್ರಕಾಂತ ಸಾಳೆ, ಪ್ರಮೋದ ಸುಲ್ತಾನಪುರೆ, ಇಸ್ಮಾಯಿಲ್ ಠಾಕೂರ್, ಕೈಲಾಸ ತೊಗರಖೇಡೆ, ಯುವರಾಜ, ಸುಭಾಷ ಒತ್ತಾಯಿಸಿದ್ದಾರೆ.