ಯಾದಗಿರಿ: ಅಪರಾಧವನ್ನು ದ್ವೇಷಿಸಬೇಕೆ ವಿನಃ ಅಪರಾಗಳನ್ನಲ್ಲ. ಹುಟ್ಟಿನಿಂದ ಯಾರೂ ತಪ್ಪು ಮಾಡಿರುವುದಿಲ್ಲ ಬದಲಾವಣೆ ಜಗದ ನಿಯಮ, ಎಲ್ಲರೂ ಬದಲಾಗಬೇಕು ಎಂದು ಜಿಲ್ಲಾಕಾರಿ ಡಾ.ಸುಶೀಲಾ ಬಿ., ತಿಳಿಸಿದರು.
ಸೋಮವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಸಭೆಯಲ್ಲಿ ಮಾತನಾಡಿ, ಜೈಲಿನ ಕೈದಿಗಳಿಗೆ ಕೌಶಲ ತರಬೇತಿ ಮತ್ತು ಕಲಿಕೆಯ ಶಿಕ್ಷಣ ನೀಡಿ ಪರಿವರ್ತನೆ ಮಾಡಬೇಕು. ವೃತ್ತಿಪರ ತರಬೇತಿಯನ್ನು ಜೈಲಿನಲ್ಲಿ ನೀಡುವ ಸಂಬಂಧ ಕ್ರಮ ಕೈಗೊಳ್ಳಿ. ಶಿಕ್ಷಣ ನೀಡಲು ಶಿಕ್ಷಕರ ಸೇವೆ ಬಳಸಿಕೊಳ್ಳಿ ಎಂದು ಸಂಬಂಸಿದ ಅಕಾರಿಗಳಿಗೆ ನಿದರ್ೇಶನ ನೀಡಿದರು.
ಕೈದಿಗಳು ಒಳ್ಳೆಯದನ್ನು ಕಲಿತುಕೊಂಡು ಹೋಗಿ ಸಮಾಜದಲ್ಲಿ ಸುಧಾರಿತ ವ್ಯಕ್ತಿಯಾಗಿ ಬದಲಾಗಬೇಕು. ಕಾರಾಗೃಹಗಳು ಧನ್ಮಾತ್ಮಕ ಚಿಂತನೆಯುಳ್ಳ ವ್ಯಕ್ತಿಗಳನ್ನಾಗಿ ಪರಿವತರ್ಿಸುವ ಮಾಧ್ಯಮವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಬಂದಿತರ ತಮ್ಮ ಕುಟುಂಬಸ್ಥರ ಮತ್ತು ವಕೀಲರೊಂದಿಗೆ ಮಾತನಾಡಲು ನೂತನ ಸಂದರ್ಶನ ಕೊಠಡಿಯನ್ನು ನಿಮರ್ಾಣ ಮಾಡಲು ಅನುದಾನ ಬಿಡುಗಡೆ ಮಾಡಿದೆ. ಆದರೆ ಇನ್ನೂ ಕಾಮಗಾರಿ ಪ್ರಾರಂಭ ಆಗಿಲ್ಲವೆ ಎಂದು ಅಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಕಾರಿ, ಕಾಮಗಾರಿಯ ಪ್ರಾರಂಭವು ನಿಧಾನವಾದರೆ ಕಾರಾಗೃಹದ ದೈನಂದಿನ ಆಡಳಿತಕ್ಕೆ ಹಾಗೂ ಬಂದಿಗಳ ಸಂದರ್ಶನಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ಸಂಬಂಸಿದ ಇಲಾಖೆ ಅಕಾರಿಗಳು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಬೇಕೆಂದು ಸೂಚಿಸಿದರು.
ಜಿಲ್ಲಾ ಕಾರಾಗೃಹದ ನೂತನ ಕಟ್ಟಡವನ್ನು ನಿಮರ್ಿಸಲು ಶಹಾಪುರ ತಾಲೂಕಿನ ಮನಗನಾಳ ಗ್ರಾಮದಲ್ಲಿ 15 ಎಕರೆ ಸಕರ್ಾರಿ ಜಮೀನನ್ನು ಮಂಜೂರು ಮಾಡಲಾಗಿದೆ. ಈಗಾಗಲೇ ಜಮೀನಿನ ಸವರ್ೇ ಮಾಡಿ ಸರಹದ್ದು, ಹದ್ದುಬಸ್ತು ಕಾರ್ಯ ಪೂರ್ಣಗೊಂಡಿರುತ್ತದೆ ಎಂದರು.
ಸಂತ್ರಸ್ತರಿಗೆ ಚೆಕ್ ವಿತರಿಸಿದ ಶಾಸಕ ಕಂದಕೂರ
ಯಾದಗಿರಿ: ಕಳೆದ ತಿಂಗಳು ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮಳೆಯಿಂದ ಬೆಳೆಹಾನಿ ಅನುಭವಿಸಿದ ಸಂತ್ರಸ್ತರಿಗೆ ಶಾಸಕ ಶರಣಗೌಡ ಕಂದಕೂರ ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಸೋಮವಾರ 43 ಫಲನುಭವಿಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರದ ಚೆಕ್ಗಳನ್ನು ವಿತರಿಸಿದರು. ಮಳೆಯಿಂದ ಮನೆಗಳು ಬಿದ್ದಿರುವ ಹಿನ್ನಲೆ. ಬಡವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಸಕರ್ಾರ ಸಹಾಯಧನ ಕಲ್ಪಿಸಿದೆ ಎಂದರು.