ಸವದತ್ತಿ ಪಟ್ಟಣದಲ್ಲಿ ಶಾಸಕ ವಿಶ್ವಾಸ ವೈದ್ಯ ಐಟಿಐ ಕಾಲೇಜು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಪ್ರಭು ಪ್ರಭುನವರ, ಮನೋಹರ ಶೆಟ್ಟರ, ಬಸವರಾಜ ಪ್ರಭುನವರ, ಶಿವು ಶಿಂತ್ರಿ ಇತರರಿದ್ದರು. 
ಜಿಲ್ಲೆ

ಕೈಗಾರಿಕೆಗಳ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿ

ಸೋಮಲಿಂಗ ತಳವಾರ

ಸವದತ್ತಿ: ಕೈಗಾರಿಕೆಗಳ ಬೆಳವಣಿಗೆಯಿಂದ ಉದ್ಯೋಗ ಸೃಷ್ಟಿಯಾಗಿ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಪಟ್ಟಣದ ಶಾಂತಿನಗರ ಬಳಿ 3.10 ಕೋಟಿ ರೂ. ವೆಚ್ಚದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಐಟಿಐ ಕಾಲೇಜು ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಕೈಗಾರಿಕೆ, ನಾವೀನ್ಯ, ಸಂಶೋಧನೆಗಳಿಂದ ಕರ್ನಾಟಕ ಔದ್ಯೋಗಿಕ ಕ್ಷೇತ್ರದಲ್ಲಿ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿದೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ಕಟ್ಟಡ ನಿರ್ಮಾಣ ಮಾಡಬೇಕೆಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ಸ್ಥಳಿಯರಾದ ಪ್ರಭು ಪ್ರಭುನವರ, ಮನೋಹರ ಶೆಟ್ಟರ, ಬಸವರಾಜ ಪ್ರಭುನವರ, ಶಿವು ಶಿಂತ್ರಿ, ಸಂತೋಷ ನೊರೆಯವರ, , ಪ್ರಕಾಶ ಲಮಾಣಿ, ಕ್ರುಸಾಬ್​ ದೊಡಮನಿ, ದಿಲಾವರ್​ ಸನದಿ, ಮಹೇಶ ಬೇಲಿಪ್​ ಇತರರು ಇದ್ದರು.