ಜಿಲ್ಲೆ

ಕೈಗಾರಿಕೆ ಪರವಾನಗಿಗೆ ಪಡೆಯುವುದೇ ಹರ ಸಾಹಸ

ಚಿತ್ರದುರ್ಗ: ಜನರ ಸ್ವಾವಲಂಬಿ ಬದುಕಿಗೆ ಹಲವು ಯೋಜನೆಗಳು ಜಾರಿಯಾಗಿದ್ದರೂ,ಕೈಗಾರಿಕೆ ಪ್ರಾರಂಭಿಸಲು ಅಗತ್ಯವಿರುವ ಪರವಾನಗಿ ಪಡೆ ಯಲು ಹರಸಾಹಸ ಮಾಡ ಬೇಕಾದ ಪರಿಸ್ಥಿತಿ ಇದೆ ಎಂದು ಚೇಂಬರ್‌ಅಫ್ ಕಾಮರ್ಸ್ ಅಧ್ಯಕ್ಷ ಎನ್.ಸತೀಶ್ ಹೇಳಿದರು. ಕೈಗಾರಿಕೆ ಮತ್ತು ವಾಣಿಜ್ಯಇಲಾಖೆ,ಕೆಸಿಟಿಯು ಟೆಕ್ಸಾಕ್ ಬೆಂಗಳೂರು ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಎಂಎಸ್‌ಎಂಇಗಳ ಕಾರ‌್ಯಕ್ಷಮತೆ ಹೆಚ್ಚಳ ಕುರಿತ ಒಂದು ದಿನದ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೈಗಾರಿಕೆ ಆರಂಭಿಸಲು ಬ್ಯಾಂಕ್‌ಗಳು ಸಾಲವನ್ನು ನೀಡಲು ಮುಂದೆ ಬರುತ್ತಿವೆ. ಆದರೆ ಯಾವ ಕೈಗಾರಿಕೆ ಪ್ರಾರಂಭಿಸಬೇಕು ಎಂಬು ದರ ಮಾಹಿತಿ ಜನರಿಗೆ ಸರಿಯಾಗಿ ಇಲ್ಲ, ಆರಂಭಕ್ಕೂ ಪರವಾನಗಿ ಪಡೆಯುವುದು ಕಷ್ಟವಾಗುತ್ತಿದೆ. ಆದ್ದರಿಂದ ಪರವಾನಗಿ ನಿಯಮಗ ಳನ್ನು ಸರಳೀಕರಿಸಬೇಕಿದೆ ಎಂದರು.

ಕೆಎಸ್‌ಎಫ್‌ಸಿ ವ್ಯವಸ್ಥಾಪಕ ಆರ್.ಬಾಬು ಮಾತನಾಡಿ,ಕೈಗಾರಿಕೆ ಆರಂಭಿಸಲು ಲಭ್ಯವಿರುವ ಸಾಲ ಹಾಗೂ ಸಹಾಯಧನದ ಸೌಲಭ್ಯ ವನ್ನು ಪಡೆಯಬೇಕಿದೆ ಎಂದರು.ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿದರು.ಟೆಕ್ಸಾಕ್ ಸಿಇಒ ಸಿದ್ದರಾಜು,ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್,ಉಪ ನಿರ್ದೇಶಕ ಬಿ.ಕೆ.ಮಂಜುನಾಥ್‌ಸ್ವಾಮಿ ಮತ್ತಿತರರು ಇದ್ದರು.