ಕಲಬುರಗಿ: ಜಿಲ್ಲೆಯಲ್ಲಿ ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಕಾಣುತ್ತಿಲ್ಲ. ಆದ್ದರಿಂದ ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್ ಹೇಳಿದರು.
ನಗರದ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ, ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಸಹಯೋಗದಲ್ಲಿ ಎಂಎಸ್‌ಎAಇಗಳ ಕಾರ್ಯಕ್ಷಮತೆ ಹೆಚ್ಚಳ ಮತ್ತು ವೇಗಗೊಳಿಸುವ ಯೋಜನೆ ಅಡಿ ಲೀನ್ ಮತ್ತು ಝಡ್.ಇ.ಡಿ ಹಾಗೂ ರಫ್ತು ಕುರಿತ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಿಎಂ ಮಿತ್ರ ಅಡಿ ಟೆಕ್ಸ್ಟೈಲ್ ಪಾರ್ಕ್ ಆರಂಭವಾಗಬೇಕಿತ್ತು. ಒಂದುವರೆ ವರ್ಷವಾದರೂ ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾಣುತ್ತಿಲ್ಲ. ಕೈಗಾರಿಕಾ ಜಾಗೃತಿ ಕಾರ್ಯಕ್ರಮಗಳು ಮಾಡಿದರೆ ಸಾಲದು, ಅದಕ್ಕೆ ಪೂರಕ ಕೆಲಸಗಳನ್ನು ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಸುರೇಖಾ ಮುನೋಳ್ಳಿ ಮಾತನಾಡಿ, ಕಲಬುರಗಿ ಜಿಲ್ಲೆಯಿಂದ ಸ್ಥಳೀಯ ತಯಾರಿಸಿದ ವಸ್ತುಗಳನ್ನು ಮತ್ತು ಸ್ಥಳೀಯವಾಗಿ ಬೆಳೆಯುವ ಉತ್ಪಾದನೆಗಳು ರಫ್ತು ಮಾಡಲು ಮತ್ತು ಅದನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಹೆಚ್ಚಿಸುವ ನಿಟ್ಟಿನಲ್ಲಿ ಇಲಾಖೆ ಕೈಗಾರಿಕೆ ಉದ್ದಿಮೆದಾರರು ಶ್ರಮಿಸಬೇಕಾಗುತ್ತದೆ ಎಂದರು.
ಕಲಬುರಗಿ ಶಾಖಾ ಕಛೇರಿ ವಿ.ಟಿ.ಪಿ.ಸಿ. ಸಹಾಯಕ ನಿರ್ದೇಶಕ ಜಾಫರ್ ಖಾಸಿಂ ಅನ್ಸಾರಿ ಅವರು ಮಾತನಾಡಿ, ವಿಟಿಪಿಸಿ ಯ ಶಾಖಾ ಕಛೇರಿಯನ್ನು ಸರ್ಕಾರವು ಸ್ಥಾಪಿಸು ತ್ತಿö್ತದೆ, ಇತ್ತೀಚೆಗೆ ಕಲ್ಯಾಣ ಕರ್ನಾಟಕ ಕಂದಾಯ ಭಾಗದ ಶಾಖಾ ಕಛೇರಿಯ ಕಲಬುರಗಿಯಲ್ಲಿ ಪ್ರಾರಂಭಿಸಿದೆ ಈ ಭಾಗದ ಜನರಿಗೆ ವಿಶೇಷವಾಗಿ ರಫ್ತುದಾರರಿಗೆ ಸಹಾಯವಾಗಲಿದೆ ಎಂದು ಹೇಳಿದರು.
ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್ ಮಾತನಾಡಿ, ಎಂಎಸ್‌ಎAಇ ಕೈಗಾರಿಕೆಗಳು ಲಾಭವನ್ನು ಹೆಚ್ಚಿಸಲು ರಫ್ತು ಮಾಡಲು ಒತ್ತು ನೀಡಬೇಕು ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಕೈಗಾರಿಕಾ ಉಪನಿರ್ದೇಶಕ ಅಬ್ದುಲ್ ಅಜೀಮ್ ಮಾತನಾಡಿ, ಆರ್‌ಎಎಂಪಿ ಯೋಜನೆ ಕುರಿತು ವಿರಣೆ ನೀಡಿದರು.
ಡಾ.ಜಗದೀಶ, ಈರಪ್ಪ, ಸತೀಶ ಕೋಟಾ ಉಪನ್ಯಾಸ ನೀಡಿದರು. ಪ್ರಮುಖರಾದ ಸುರೇಶ ಎನ್ ಸಾಗರ್, ಸತೀಶ ಎನ್., ಸುರೇಖಾ ಮುನೋಳಿ, ಚನ್ನಬಸಯ್ಯ ನಂದಿಕೋಲ, ಮಂಜುನಾಥ ಜೇವರ್ಗಿ, ಜೆ.ಎಸ್.ಬಾಬು, ಮಂಜುನಾಥ ಎಚ್. ಸೇರಿದಂತೆ ಕೈಗಾರಿಕಾ ಸಂಸ್ಥೆ, ಸಣ್ಣ ಕೈಗಾರಿಕೆಗಳ ಮಾಲೀಕರ ಸಂಘ, ದಾಲ್ ಮಿಲ್ಲರ್ಸ್ ಅಸೋಸಿಯೇಷನ್, ಗುಲಬರ್ಗ ಇಂಡಿಸ್ಟಿçÃಯಲ್ ಎಸ್ಟೆಟ್ ಮ್ಯಾನುಫ್ಯಾಕ್ಚರ್ಸ್ ಅಸೋಸಿಯೇಷನ್, ಕೈಗಾರಿಕಾ ವಸಾಹತು ಮಾಲೀಕರ ಸಂಘ, ಮ್ಯಾನುಫ್ಯಾಕ್ಚರ್ಸ್ ಲೇಡಿಸ್ ಅಸೋಸಿಯೇಷನ್ ಸದಸ್ಯರು ಇದ್ದರು.