ಜಿಲ್ಲೆ

ಕೇಸ್ ವಾಪಸ್ ಪಡೆದಿದ್ದಕ್ಕೆ ಸಂಭ್ರಮ

ಬೀದರ್: ಕೋಸಂನ ಪೂಜಾ ಹಡಪದ ಹತ್ಯೆ ವಿರೋಧಿಸಿ ಪ್ರತಿಭಟಿಸಿದ ಯುವಕರ ಮೇಲೆ ವಿವಿಧ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಈ ಹಿನ್ನೆಲೆಯಲ್ಲಿ ಹಿಂದು ಹಿತರಕ್ಷಣಾ ವೇದಿಕೆಯಿಂದ ನಗರದಲ್ಲಿ ಗುರುವಾರ ಸಿಹಿ ಹಂಚಿ ಸಂಭ್ರಮಿಸಲಾಯಿತು.

ವೇದಿಕೆ ಸಂಚಾಲಕರೂ ಆದ ಬಿಜೆಪಿ ಮುಖಂಡ ವಿಜಯಕುಮಾರ ಪಾಟೀಲ್ ಗಾದಗಿ ನೇತೃತ್ವದಲ್ಲಿ ಸಂಭ್ರಮಿಸಿದ ಯುವಕರು,    ಭಾಲ್ಕಿ ತಾಲೂಕಿನ ಕೋಸಂ ಗ್ರಾಮದ ವಿದ್ಯಾರ್ಥಿನಿ ಪೂಜಾ ಹಡಪದ ಅತ್ಯಾಚಾರ, ಕೊಲೆ ಖಂಡಿಸಿ 2018ರ ಜನವರಿಯಲ್ಲಿ ಹಿಂದು ಹಿತರಕ್ಷಣಾ ಸಮಿತಿಯಿಂದ ಬೀದರ್ ಬಂದ್ ಗೆ ಕರೆ ನೀಡಲಾಗಿತ್ತು. ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಅಮಾಯಕರ ಮೇಲೆ ವಿನಾಕಾರಣ ಉದ್ದೇಶಪೂರ್ವಕವಾಗಿ ವಿವಿಧ ಠಾಣೆಗಳಲ್ಲಿ ಕೇಸ್ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಹಲವರ ಮೇಲೆ ಹಾಕಿದ ಪ್ರಕರಣಗಳು ವಾಪಸ್ ಪಡೆಯುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಸರ್ಕಾರ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆದಿದ್ದು ಸಂತಸ ತಂದಿದೆ ಎಂದು ಪಾಟೀಲ್ ತಿಳಿಸಿದ್ದಾರೆ.

ಪ್ರಮುಖರಾದ ದಿಲೀಪ ಗುಮ್ಮಾ, ನಾಗನಾಥ ಜೀರ್ಗೆ, ಮಂಜುನಾಥ, ಉಮೇಶ ಫತ್ತೇಪುರ, ಸಿದ್ದು ಹಾವಪ್ಪ, ಮಹೇಶ ಬಸಪ್ಪ, ಮಹೇಶ ನಾಗಣ್ಣ, ರಾಜಪ್ಪ ಶರಣಪ್ಪ ಇತರರಿದ್ದರು.