ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ (ನಂ.6) ಅಧಿಕಾರಿಗಳು ಶುಕ್ರವಾರ ಕಾರ್ಯಾಚರಣೆ ನಡೆಸಿ ರಸ್ತೆ, ಫುಟ್ಪಾತ್ ಅತಿಕ್ರಮಿಸಿ ವ್ಯಾಪಾರ ನಡೆಸುತ್ತಿದ್ದ ಸುಮಾರು 26 ಗೂಡಂಗಡಿ, ತಳ್ಳುಗಾಡಿಗಳನ್ನು ತೆರವುಗೊಳಿಸಿದರು.
ಕೇಶ್ವಾಪುರ ಸವೋದಯ ವೃತ್ತದಿಂದ ರಮೇಶ ಭವನದವರೆಗೆ ಹಾಗೂ ಕುಸುಗಲ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಕೆಲ ದಿನಗಳ ಹಿಂದೆ ಪಾಲಿಕೆ ವತಿಯಿಂದ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಆದರೆ ತೆರವುಗೊಳಿಸಿರಲಿಲ್ಲ. ಶುಕ್ರವಾರ ಪಾಲಿಕೆ ಸಹಾಯಕ ಆಯುಕ್ತ ಎಸ್.ಸಿ. ಬೇವೂರ ನೇತೃತ್ವದಲ್ಲಿ ರಸ್ತೆ ಬದಿಯ, ಫುಟ್ಪಾತ್ ಮೇಲಿದ್ದ ತಳ್ಳುಗಾಡಿ, ಶಾಶ್ವತ ನಿರ್ವಣಗ ಅಂಗಡಿಗಳನ್ನು ತೆರವು ಮಾಡಿ ಟ್ರ್ಯಾಕ್ಟರ್ನಲ್ಲಿ ತುಂಬಿಕೊಂಡು ಸಾಗಿಸಲಾಯಿತು.