ಚಿಕ್ಕೋಡಿ ಗ್ರಾಮೀಣ: ಚಿಕ್ಕೋಡಿ ತಾಲೂಕಿನ ಕೇರೂರ ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಪೂರೈಕೆದಾರ ಸದಸ್ಯರ ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ತಲಾ 50 ಸಾವಿರ ರೂ. ವಿಮಾ ಪರಿಹಾರ ಮತ್ತು ಮೃತ ಸದಸ್ಯರ ವಾರಸುದಾರರಿಗೆ ಕಲ್ಯಾಣ ಮಂಡಳಿಯಿಂದ 20 ಸಾವಿರ ರೂ. ಮೊತ್ತದ ಚೆಕ್‌ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಂಗಳವಾರ ವಿತರಿಸಿದರು.
ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಮಾತನಾಡಿ, ಕೆರೂರ ಹಾಲು ಉತ್ಪಾದಕರ ಸಂಘ ಸತತವಾಗಿ ರೈತರ ಶ್ರೇಯೋಭಿವೃದ್ಧಿಗೆಗೆ ಶ್ರಮಿಸುತ್ತಿದ್ದು, ಅನೇಕ ಯೋಜನೆ ರೂಪಿಸಿದೆ ಎಂದರು. ಕೆಎಂಎಫ್ ವಿಸ್ತರಣಾಕಾರಿ ಶ್ರೀಶೈಲ ಪೂಜಾರಿ, ಪುಂಡಲೀಕ ಈಟಿ, ಪಶು ವೈದ್ಯಾಕಾರಿ ಶಿವಾನಂದ ಕಮತೆ, ಪಿಕೆಪಿಎಸ್ ಅಧ್ಯಕ್ಷ ಬಿ.ಡಿ.ಪಾಟೀಲ, ಸುರೇಶ ಬಾಡಕರ, ಅಲಗೌಡ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಶಿವಾನಂದ ಮಾಂಗನೂರೆ, ರವಿ ಪಾಟೀಲ ಇತರರಿದ್ದರು.