ಜಿಲ್ಲೆ

ಕೇರಳ ಲಾಟರಿ ಮಾರುತ್ತಿದ್ದವರ ಸೆರೆ

ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ ನಿವಾಸಿ ಸೋಮಶೇಖರ್ ಬಂಧಿತ. ಈತನಿಂದ 54,600 ರೂ. ಮೌಲ್ಯದ ಲಾಟರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ನೇತೃತ್ವದಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಮಹೇಶ, ವಿಶೇಷ ಪೇದೆ ಮಹೇಶ್, ಸಿಬ್ಬಂದಿ ಚಿನ್ನಸ್ವಾಮಿ, ರವಿಚಂದ್ರ, ಚಾಲಕ ಜಯಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.