ಜಿಲ್ಲೆ

ಕೇರಳ ಲಾಟರಿ ಮಾರುತ್ತಿದ್ದವನ ಬಂಧನ

ಸಿದ್ದಾಪುರ: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಘಟ್ಟದಳ ಬಸ್ ನಿಲ್ದಾಣದ ಬಳಿ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.


ಎಂ.ಜಿ.ರಸ್ತೆ ಸಿದ್ದಾಪುರದ ನಿವಾಸಿ ಎಂ.ಎ.ಅಬ್ದುಲ್ ರಫೀಕ್(65) ಬಂಧಿತ. ಈತ ಕೇರಳ ರಾಜ್ಯದ ಲಾಟರಿ ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿದ್ದಾಪುರ ಠಾಣೆ ಎಸ್‌ಐ ರಾಘವೇಂದ್ರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿ ಕೇರಳ ರಾಜ್ಯದ 120 ಲಾಟರಿ ಟಿಕೆಟ್ ಮತ್ತು 500 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.


ಕಾರ್ಯಾಚರಣೆಯಲ್ಲಿ ಸಿದ್ದಾಪುರ ಠಾಣಾ ಎಎಸ್‌ಐ ತಮ್ಮಯ್ಯ, ಸಿಬ್ಬಂದಿ ರತನ್, ಮಲ್ಲಿಕಾರ್ಜುನ್ ಪಾಲ್ಗೊಂಡಿದ್ದರು.