ಮೋಟಾರ್, ಕೇಬಲ ಕಳ್ಳರ ಬಂಧನ
ಚಿಕ್ಕೋಡಿ :ರೈತರ ವಿದ್ಯುತ್ ಮೋಟಾರ್ ಹಾಗೂ ಕೇಬಲ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ರಾಯಬಾಗ ತಾಲೂಕಿನ ಕುಡಚಿ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಬಂಧಿತ ಇಬ್ಬರು ಆರೋಪಿಗಳು ಚಿಂಚಲಿ ಪಟ್ಟಣದ ಹೊರವಲಯದ ಕೀಲಕಟ್ಟೆಯ ಹತ್ತಿರ ನಿಲ್ಲಿಸಿದ್ದ ದ್ವಿಚಕ್ರ ವಾಹನಕ್ಕೆ ಅಳವಡಿಸಿದ್ದ ಕೇಬಲ ಹಾಗೂ ಮೋಟಾರ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಕುಡಚಿ,ಚಿಂಚಲಿ ಮತ್ತು ಮೊರಬ ಗ್ರಾಮಗಳಲ್ಲಿ ಕಳ್ಳತನ ಮಾಡಿದ್ದರು.
ಬಂಧಿತ ಆರೋಪಿಗಳಿಂದ ನೀರಿಗೆ ಬಳಕೆ ಮಾಡುವ 11 ವಿದ್ಯುತ್ ಮೋಟಾರ್ ,300 ಪೋಟ್ ಕೇಬಲ ಸೇರಿ 2.30,000 ಮೌಲ್ಯದ ವಸ್ತುಗಳನ್ನು ವಶ ಪಡೆಸಿಕೊಳ್ಳಲಾಗಿದೆ.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.