ಜಿಲ್ಲೆ

ಕೇತುಪುರ ಗ್ರಾ.ಪಂ. ಜೆಡಿಎಸ್ ತೆಕ್ಕೆಗೆ

ಬನ್ನೂರು: ಪಟ್ಟಣ ಸಮೀಪದ ಕೇತುಪುರ ಗ್ರಾಮ ಪಂಚಾಯಿತಿಗೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಎಲ್.ಮಹೇಶ್ ಅಧ್ಯಕ್ಷರಾಗಿ, ಪುಟ್ಟಸಿದ್ದಮ್ಮ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.


ಕೇತುಪುರ ಗ್ರಾಮ ಪಂಚಾಯಿತಿಯಲ್ಲಿ 15 ಜನ ಸದಸ್ಯರಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗ ಮತ್ತು ಉಪಾಧ್ಯಕ್ಷ ಸ್ಥಾನವು ಅನುಸೂಚಿತ ಜಾತಿಗೆ ಮೀಸಲಾಗಿದ್ದು, ಗುರುವಾರ ಚುನಾವಣೆ ಪ್ರಕ್ರಿಯೆ ನಡೆಯಿತು.


ಅಧ್ಯಕ್ಷ ಸ್ಥಾನಕ್ಕೆ ಎಲ್.ಮಹೇಶ್ ಮತ್ತು ಬಿ.ಲೋಕೇಶ್ ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಯ್ಯ ಮತ್ತು ಪುಟ್ಟಸಿದ್ದಮ್ಮ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಎಲ್.ಮಹೇಶ್ 10 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರೆ, 8 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಪುಟ್ಟಸಿದ್ದಮ್ಮ ಆಯ್ಕೆಯಾದರು. ಕಾವೇರಿ ನಿಗಮದ ಇಂಜಿನಿಯರ್ ಚಂಗಪ್ಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.

ಸದಸ್ಯರಾದ ಸುಧಾ, ದೇವಮ್ಮ, ರಂಗಶೆಟ್ಟಿ, ನಾಗರತ್ನಮ್ಮ, ಪೂರ್ಣಿಮ, ಚಂದ್ರಶೇಖರ್, ಬಿ.ಲೋಕೇಶ್, ಬಿ.ನಾಗವೇಣಿ, ಮಂಜುನಾಥ, ರಾಜಲಕ್ಷ್ಮೀ, ಶೃಂಗಾ, ಟಿ.ಪಿ.ಬೋರೇಗೌಡ, ಕೆ.ಪಿ.ಗಿರೀಶ್, ಕೆ.ಎಸ್.ಬಾಲರಾಜು, ಬೇವಿನಹಳ್ಳಿ ಕುಮಾರ್, ಗಾಣಿಕೊಪ್ಪಲು ರಾಜೇಶ್, ಎನ್.ಬೋರೇಗೌಡ, ಆರ್.ನಾಗೇಶ್, ಲಂಕೇಶ್, ಪ್ರಕಾಶ್, ಬೊಮ್ಮಪ್ರಸನ್ನ, ಆರ್.ನಾಗೇಶ್, ವೀರಭದ್ರ, ಸಂತೋಷ್, ರಂಗರಾಜು, ಸಿ.ಶೇಖರ್, ಎನ್.ನಾಗೇಶ್, ಹೋಟಲ್‌ಮಂಜು, ಸೋಮ ಇತರರು ಇದ್ದರು.