ಜಿಲ್ಲೆ

ಕೇಜ್ ವ್ಹೀಲ್‌ನಲ್ಲಿ ಸಿಲುಕಿದ ಎಮ್ಮೆ

ಕಂಪ್ಲಿ: ದೇವಲಾಪುರ ಗ್ರಾಮದಲ್ಲಿ ಟ್ರಾೃಕ್ಟರ್‌ನ ಕೇಜ್‌ವ್ಹೀಲ್‌ಗೆ ಕಟ್ಟಿಹಾಕಿದ್ದ ಎಮ್ಮೆಯ ಗೋಣು ಕೇಜ್‌ವ್ಹೀಲ್ ಗ್ರೀಲ್‌ಗಳ ನಡುವೆ ಸಿಲುಕಿತ್ತು. ಇದರಿಂದ ಎಮ್ಮೆ ಪರದಾಡಿತು. ಎಮ್ಮೆಯ ಮಾಲೀಕ ಮಹೇಂದ್ರ ಅವರು ಕೇಜ್‌ವ್ಹೀಲ್ ಗ್ರಿಲ್ ಕತ್ತರಿಸಿ ಎಮ್ಮೆಯನ್ನು ಸೋಮವಾರ ರಕ್ಷಿಸಿದರು.