ಜಿಲ್ಲೆ

ಕೇಕ್ ಕತ್ತರಿಸಿ ಕುಮಾರಸ್ವಾಮಿ ಜನ್ಮದಿನ ಆಚರಣೆ

ಬೀದರ್: ಇಲ್ಲಿಯ ಜೆಡಿಎಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಶುಕ್ರವಾರ ಪಕ್ಷದ ಜಿಲ್ಲಾ ಹಾಗೂ ಬೀದರ್ ತಾಲ್ಲೂಕು ಘಟಕದ ವತಿಯಿಂದ ಕೇಕ್ ಕತ್ತರಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮದಿನ ಆಚರಿಸಲಾಯಿತು.
ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಬರಹ ಹೊಂದಿದ್ದ ಕೇಕ್ ಅನ್ನು ಪಕ್ಷದ ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ ಕತ್ತರಿಸಿದರು.
ಎರಡು ಬಾರಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಮಾದರಿ ಆಡಳಿತ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಅವರು ಹೇಳಿದರು.
ಜನಪರ ಕಾರ್ಯಗಳಿಗಾಗಿ ಕುಮಾರಸ್ವಾಮಿ ಅವರು ನಾಡಿನ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಪಕ್ಷ ರಾಜ್ಯದಲ್ಲಿ ಜಯಭೇರಿ ಬಾರಿಸಲಿದೆ. ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಗೆ ಕೇಕ್ ವಿತರಿಸಲಾಯಿತು. ಈ ವೇಳೆ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮೊಳಗಿದವು.
ಪಕ್ಷದ ರಾಜ್ಯ ವಕ್ತಾರ ಮಹಮ್ಮದ್ ಅಸದೊದ್ದಿನ್, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ, ವಕ್ತಾರ ಅಶೋಕಕುಮಾರ ಕರಂಜಿ, ಎಸ್.ಸಿ. ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ದೇವೇಂದ್ರ ಸೋನಿ, ಎಸ್.ಟಿ. ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಬೋಮಗೊಂಡ ಚಿಟ್ಟಾವಾಡಿ, ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಜ್ಜಾದ್, ವಿದ್ಯಾರ್ಥಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಅಭಿ ಕಾಳೆ, ಮಹಿಳಾ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷೆ ಲಲಿತಾ, ನಗರ ಘಟಕದ ಅಧ್ಯಕ್ಷ ಸುದರ್ಶನ್ ಸುಂದರರಾಜ್, ಚಿಟ್ಟಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಚಿಟ್ಟಾ, ಪ್ರಮುಖರಾದ ರಾಜು ಕರಡ್ಯಾಳ್, ಮನೋಹರ ದಂಡೆ, ಸರಫರಾಜ್ ಹಾಸ್ಮಿ, ನವಾಜ್ ಖಾನ್, ಗಾಲೀಬ್ ಹಾಸ್ಮಿ, ಸೋಮನಾಥ ಕಂದಗೂಳ, ಶಿವರಾಜ ಕಟಗಿ, ಶಿವಪುತ್ರ ಮಾಳಗೆ, ಹುಮನಾಬಾದ್, ಜಾನ್ಸನ್, ಸಂಗಮ್ಮ ಪಾಟೀಲ, ಸಂಗೀತಾ ಪಾಟೀಲ, ಶಾಂತಮ್ಮ, ಸಂಗು ಚಿದ್ರಿ, ಅಬ್ದುಲ್ ಸಮದ್, ವಿನಯ್ ಇದ್ದರು.