ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ೮ನೇ ಘಟಿಕೋತ್ಸವ ಮಾ.೧೧ರಂದು ನಡೆಯಲಿದ್ದು, ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕ ಪಡೆದ ೩೬ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸೇರಿ ೮೨೪ ಅಭ್ಯರ್ಥಿಗಳಿಗೆ ಸ್ನಾತಕ ಮತ್ತು ಸ್ನಾತಕೊತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದು ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಬೆಳಗ್ಗೆ ೯.೩೦ಕ್ಕೆ ವಿವಿ ಆವರಣದ ವಿವಿಧೋz್ದೆÃಶ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿವಿ ಕುಲಾಧಿಪತಿ ವಿಜಯ ಕೇಶವ ಗೋಖಲೆ ಅಧ್ಯಕ್ಷತೆ ವಹಿಸಲಿದ್ದು, ೩೮ ಜನರಿಗೆ ಪಿಎಚ್.ಡಿ. ಪದವಿ ಪ್ರದಾನ ಮಾಡಲಾಗುವುದು ಎಂದು ವಿಶ್ವವಿದ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೫ ಸಾವಿರಕ್ಕೆ ವಿದ್ಯಾರ್ಥಿಗಳ ಸಂಖ್ಯೆ: ವಿವಿಯಲ್ಲಿ ಪ್ರಸ್ತುತ ೨,೮೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ೪ ರಂತೆ ಎಂಟು ವಸತಿ ನಿಲಯಗಳಿವೆ. ೫೪೦ ಸಂಖ್ಯೆಯ ಎರಡು ಹಾಸ್ಟೆಲ್ ನಿರ್ಮಾಣ ಹಂತದಲ್ಲಿದ್ದು, ಎರಡ್ಮೂರು ವರ್ಷದಲ್ಲಿ ವಿವಿ ಪ್ರವೇಶಾತಿ ಪ್ರಮಾಣ ೫,೦೦೦ ಹೆಚ್ಚಳ ನಿರೀಕ್ಷೆ ಇದೆ. ೫೪೦ ಸಂಖ್ಯೆಯ ಪ್ರತ್ಯೇಕ ಹಾಸ್ಟೆಲï ನಿರ್ಮಾಣಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಶೀಘ್ರ ಅನುಮೋದನೆ ದೊರೆಯಲಿದೆ ಎಂದು ಭಟ್ಟು ಸತ್ಯನಾರಾಯಣ ತಿಳಿಸಿದರು.
ದೇಶದ ೧೫೧-೨೦೦ ವಿವಿಯಲ್ಲಿ ಸಿಯುಕೆ ಸ್ಥಾನ ಪಡೆದಿದೆ. ಭಾರತದ ಅಗ್ರ ವಿವಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಮಯಾವಕಾಶ ಬೇಕಿದೆ. ಮಂಜೂರಾತಿ ದೊರೆತ ೨೦೬ರಲ್ಲಿ ೧೭೫ ಪ್ರಾಧ್ಯಾಪಕರನ್ನು ನೇಮಿಸಲಾಗಿದೆ. ಹೊಸದಾಗಿ ಸಸ್ಯ ವಿe್ಞÁನ, ಪ್ರಾಣಿ ವಿe್ಞÁನ, ಜೆನಿಟಿಕ್ ಜಿನೋಮ್ಸ್ ಹಾಗೂ ಸ್ಟಾö್ಯಟಿಸ್ಟಿಕ್ಸ್ ವಿಭಾಗ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ವಿವಿ ಹಸುರೀಕರಣ, ಅಂತರ್ಜಲ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ೧.೨೧ ಕೋಟಿ ರೂ. ನೀಡಿದ್ದು, ಔಷಧೀಯ ಸಸ್ಯಗಳ ಉದ್ಯಾನ ಮಾಡಲು ಆಯುಷ್ ಇಲಾಖೆ ಜತೆ ಚರ್ಚಿಸಲಾಗಿದೆ. ಅಮರ್ಜಾದಿಂದ ವಿವಿಗೆ ನೀರು ಪೂರೈಸುತ್ತಿದ್ದು, ಪ್ರತ್ಯೇಕ ಪೈಪ್‌ಲೈನ್‌ಗೆ ಬೇಡಿಕೆ ಇಡಲಾಗಿದೆ. ಆವರಣದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಂಡು ಶಾಶ್ವತ ಪರಿಹಾರಕ್ಕೆ ಚರ್ಚಿಸಲಾಗಿದೆ. ಸಂಸ್ಕೃತ ಅಧ್ಯಯನ ಕೇಂದ್ರ ಆರಂಭದ ಪ್ರಕ್ರಿಯೆ ನಡೆದಿದೆ ಎಂದು ಹೇಳಿದರು.
ವಿವಿ ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ, ಪರೀಕ್ಷಾ ನಿಯಂತ್ರಕ ಡಾ.ಕೋಟಾ ಸಾಯಿ ಕೃಷ್ಣ, ಸಂಶೋಧನಾ ಮತ್ತು ಇನ್ಕುÈಬೇಷನ್ ಸೆಲ್ ಮುಖ್ಯಸ್ಥ ರಾಜೀವ ಜೋಷಿ, ಪಿಆರ್‌ಓ ಗಣಪತಿ ಬಿ.ಸಿನ್ನೂರ, ಎಪಿಆರ್‌ಓ ಪ್ರಕಾಶ ಬಾಳಿಕಾಯಿ ಇದ್ದರು.