ಜಿಲ್ಲೆ

ಕೇಂದ್ರದ ಕಾಯ್ದೆಯಿಂದ ರೈತರ ಆದಾಯ ದ್ವಿಗುಣ

ತೀರ್ಥಹಳ್ಳಿ: ಮುಂದಿನ 2 ವರ್ಷಗಳಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತಪರವಾದ ಗಟ್ಟಿ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಬೆಳೆಗಾರ ಹಾಗೂ ಬಳಕೆದಾರರ ನಡುವಿನ ಅಂತರ ಕಡಿಮೆ ಮಾಡಿ ರೈತರಿಗೆ ಹೆಚ್ಚಿನ ಲಾಭ ದೊರೆಯುವ ಸದುದ್ದೇಶದ ಕಾಯ್ದೆ ಮಹತ್ವ ಅರಿಯದೆ ಪ್ರತಿಭಟನೆ ಹೆಸರಿನಲ್ಲಿ ರೈತರನ್ನು ಎತ್ತಿಕಟ್ಟಲಾಗುತ್ತಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೃಷಿ ಉತ್ಪನ್ನಗಳನ್ನು ರೈತರು ಇಚ್ಛೆಪಟ್ಟವರಿಗೆ ಮಾರಾಟ ಮಾಡುವ ಹಕ್ಕನ್ನು ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ನೀಡಲಾಗಿದೆ. ದೇಶದಲ್ಲಿ ಪ್ರಥಮ ಬಾರಿಗೆ ಇಂತಹ ಮಹತ್ವದ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ಬೇಡಿಕೆ ಹಾಗೂ ಉತ್ಪಾದನೆ ಆಧಾರದಲ್ಲಿ ಧಾರಣೆ ನಿಗದಿಯಾಗುತ್ತದೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಜತೆಗೆ ಆವರ್ತನಾ ನಿಧಿ ಕೂಡ ರೈತರ ರಕ್ಷಣೆಗಿದೆ. ಇದನ್ನು ವಿರೋಧಿಸುವವರು ಕಾಯ್ದೆ ಓದಬೇಕು ಎಂದು ಕುಟುಕಿದರು.

ರಾಜ್ಯದಲ್ಲಿ ಎಪಿಎಂಸಿ ಅಸ್ತಿತ್ವದಲ್ಲಿರುತ್ತದೆ. ಆದರೆ ಮಾರುಕಟ್ಟೆಯಿಂದ ಹೊರಗೆ ನಡೆಯುವ ವ್ಯಾಪಾರವನ್ನು ತಡೆಯುವ ಅಧಿಕಾರ ಇರುವುದಿಲ್ಲ. ಈ ಕಾಯ್ದೆಯಿಂದ ಎಪಿಎಂಸಿಯಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳುತ್ತದೆ ಎಂದು ಹೇಳಿದರು.

ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಎಪಿಎಂಸಿ ಸದಸ್ಯ ಸಿ.ಬಿ.ಈಶ್ವರ್, ತಾಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ತಾಪಂ ಸದಸ್ಯರಾದ ಪ್ರಶಾಂತ್ ಕುಕ್ಕೆ, ಟಿ.ಮಂಜುನಾಥ್, ಚಂದವಳ್ಳಿ ಸೋಮಶೇಕರ್, ಗೀತಾಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ಡೀಮ್್ಡ ಫಾರೆಸ್ಟ್ ಹೆಸರಿನಲ್ಲಿ ಘೊಷಣೆಯಾಗಿದ್ದ 9 ಲಕ್ಷ ಹೆಕ್ಟೇರ್ ಅರಣ್ಯ ಭೂಮಿಯಿಂದಾಗಿ ರಾಜ್ಯದಲ್ಲಿ ಸ್ಮಶಾನಗಳ ನಿರ್ವಣಕ್ಕೂ ಅವಕಾಶವಿರಲಿಲ್ಲ. ಇದರಲ್ಲಿ 6.50 ಲಕ್ಷ ಹೆಕ್ಟೇರ್ ಭೂಮಿ ಬಿಟ್ಟುಕೊಡಲು ಅರಣ್ಯ ಇಲಾಖೆ ತೀರ್ವನಿಸಿದೆ. ಈ ಬಗ್ಗೆ ಸವೋಚ್ಛ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಲು ಸಮ್ಮತಿಸಿದೆ. ಇದರಿಂದ 94 ಸಿ ಸೇರಿ ಅರ್ಹರಿಗೆ ಅನುಕೂಲವಾಗಲಿದೆ.

| ಆರಗ ಜ್ಞಾನೇಂದ್ರ, ಶಾಸಕ