ಜಿಲ್ಲೆ

ಕೇಂದ್ರ ಸರ್ಕಾರದ ಹೊಸ ಕಾನೂನನ್ನು ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಹಾಸನ : ವಾಣಿಜ್ಯ ಬಳಕೆಯ ವಾಹನಗಳಿಂದ ಅಪಘಾತ ಸಂಭವಿಸಿದರೆ ಚಾಲಕನಿಗೆ 7 ಲಕ್ಷ ರೂ. ದಂಡ ಹಾಗು 10 ವರ್ಷ ಕಾರಾಗೃಹ ಶಿಕ್ಷೆ ಎಂಬ ಹೊಸ ಕಾನೂನನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಎನ್.ಆರ್. ವೃತ್ತದಿಂದ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.
ಲೋಕಸಭೆ ಅಧಿವೇಶನದಲ್ಲಿ ಕೇಂದ್ರ ಸಚಿವ ಅಮಿತ್ ಷಾ ಅವರು ವಾಣಿಜ್ಯ ಬಳಕೆಯ ವಾಹನಗಳ ಚಾಲಕರಿಗೆ ಜಾರಿಗೊಳಿಸಿರುವ ಕಾನೂನು ಅವೈಜ್ಞಾನಿಕವಾಗಿದೆ ಎಂದರು.
ವಾಹನವು ರಸ್ತೆಯಲ್ಲಿ ಚಲಿಸುವಾಗ ಅಪಘಾತ ಸಂಭವಿಸಿದರೆ ಚಾಲಕರನ್ನೇ ನೇರ ಹೊಣೆಗಾರರನ್ನಾಗಿ ಮಾಡುವುದು ತಪ್ಪು. ಬೇರೆ ವಾಹನ ಚಾಲಕರಿಂದಲೂ ಪ್ರಮಾದ ಆಗಬಹುದು. ಆದರೆ ನಮ್ಮನ್ನೇ ಆರೋಪಿ ಸ್ಥಾನದಲ್ಲಿರಿಸಿ ಕಠಿಣ ಶಿಕ್ಷೆ ವಿಧಿಸುವುದು ಬೇಡ. ಕೇಂದ್ರ ಸರ್ಕಾರ ಯಾವ ಮಾನದಂಡ ಅನುಸರಿಸಿ ಇಂತಹ ನಿಯಮ ಜಾರಿಗೊಳಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅಪಘಾತ ಸಂಭವಿಸಿದರೆ ಪರಿಹಾರ ನೀಡಲು ವಿಮೆ ಮಾಡಿಸಿರುತ್ತೇವೆ. ವಾಹನ ಚಾಲನೆಯನ್ನೇ ಜೀವನಾಧಾರ ಎಂದು ನಂಬಿರುವವರಿಗೆ ಕೇಂದ್ರ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇಲ್ಲಿ ಸಿಗುವ ಅಲ್ಪ ಸಂಬಳದಲ್ಲಿ ಕುಟುಂಬ ನಿರ್ವಹಿಸಬೇಕು. ಆದರೆ ಈ ಕಷ್ಟಗಳ ನಡುವೆ ಕೇಂದ್ರ ಮತ್ತೊಂದು ಆಘಾತ ನೀಡಲು ಹೊರಟಿರುವುದು ಖಂಡನೀಯ ಎಂದರು.
ನಮ್ಮ ಮನವಿಯನ್ನು ಪರಿಶೀಲಿಸಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲವಾದರೆ ರಾಷ್ಟ್ರಾದ್ಯಂತ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ರಘುಗೌಡ, ಉಪಾಧ್ಯಕ್ಷ ಮಧುಗೌಡ, ಗಿರೀಶ್, ಧರ್ಮಣ್ಣ, ನಾಹೀದ್ ರೋಷನ್, ಮೋಹನ್, ಮಂಜೇಗೌಡ, ಸಂತೋಷ್ ಕುಮಾರ್, ವಿಜಯಕುಮಾರ್, ಭರತ್ ಕುಮಾರ್, ಬಸವರಾಜು ಇತರರು ಇದ್ದರು.

ಜಿಲ್ಲಾ ಚಾಲಕರ ಒಕ್ಕೂಟದಿಂದ ಪ್ರತಿಭಟನೆ
ಕೇಂದ್ರ ಸರ್ಕಾರದ ಹೊಸ ಕಾನೂನನ್ನು ಹಿಂಪಡೆಯುವಂತೆ ಆಗ್ರಹ

ವಿಜಯವಾಣಿ ಸುದ್ದಿಜಾಲ ಹಾಸನ :
ವಾಣಿಜ್ಯ ಬಳಕೆಯ ವಾಹನಗಳಿಂದ ಅಪಘಾತ ಸಂಭವಿಸಿದರೆ ಚಾಲಕನಿಗೆ 7 ಲಕ್ಷ ರೂ. ದಂಡ ಹಾಗು 10 ವರ್ಷ ಕಾರಾಗೃಹ ಶಿಕ್ಷೆ ಎಂಬ ಹೊಸ ಕಾನೂನನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಚಾಲಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.