ವಿಜಯವಾಣಿ ಸುದ್ದಿಜಾಲ ಧಾರವಾಡ
ಕೇಂದ್ರ ಸರ್ಕಾರದ ವಿವಿಧ ಯೋಜನೆ ಮತ್ತು ವಿವಿಧ ಕೈಗಾರಿಕೆ, ಕಂಪನಿಗಳ ಸಿಎಸ್‌ಆರ್ ಅನುದಾನದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗಿದೆ. ವಿಶೇಷವಾಗಿ ಜಿಲ್ಲೆಯ ಶಿಕ್ಷಣ ಸುಧಾರಣೆ, ಆರೋಗ್ಯ ವರ್ಧನೆ, ಉದ್ಯೋಗ ಹೆಚ್ಚಳ ಮತ್ತು ಕೃಷಿ ಅಭಿವೃದ್ಧಿಗೆ ಆದÀ್ಯತೆ ನೀಡಿ ಅನುದಾನ ವ್ಯಯಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ ಭಾರತ ಪೆಟ್ರೋಲಿಯಂ ಕಾರ್ಪೋರೇಷನ್ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಿರ್ಮಿಸಿರುವ ವಿಶೇಷ ಸೌಲಭ್ಯಗಳುಳ್ಳ ಮಾದರಿ ಶಾಲಾ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಾದರಿ ಶಾಲಾ ಕಟ್ಟಡಕ್ಕೆ ಅಂದಾಜು ೨.೮೪ ಕೋಟಿ ರೂ. ವೆಚ್ಚ ಮಾಡಲಾಗಿದೆ. ಹುಬ್ಬಳ್ಳಿಯ ಡಾ. ಸಿ.ಎಚ್.ವಿ.ಎಸ್.ವಿ. ಪ್ರಸಾದ ಸ್ವರ್ಣಾ ಗ್ರೂಪ್ ಆಫ್ ಕಂಪನೀಸ್ ಮತ್ತು ಧಾರವಾಡ ನಿರ್ಮಿತಿ ಕೇಂದ್ರದ ಸಹಯೋಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದರು.
ಶಾಸಕ ಅಮೃತ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬಯಲು ಸೀಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ, ಮಾಜಿ ಶಾಸಕಿ ಸೀಮಾ ಮಸೂತಿ, ಹಾರೋಬೆಳವಡಿ ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ತಳವಾರ, ಉಪಾಧ್ಯಕ್ಷ ವೀರೇಶ ಕನಾಜಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಬಿಇಒ ಉಮೇಶ ಬಮ್ಮಕ್ಕನವರ, ಮುಖ್ಯ ಶಿಕ್ಷಕಿ ಎಸ್.ಎಸ್. ದೇಸಾಯಿ ಹಾಗೂ ಗ್ರಾ.ಪಂ. ಮತ್ತು ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಶಾಲಾ ಕೊಠಡಿಗಳ ಉದ್ಘಾಟನೆ:
ತಾಲೂಕಿನ ವಿವಿಧ ಗ್ರಾಮಗಳ ಶಾಲೆಗಳಲ್ಲಿ ನಿರ್ಮಾಣಗೊಂಡಿರುವ ಶಾಲಾ ಕೊಠಡಿಗಳನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು. ಕರಡಿಗುಡ್ಡದಲ್ಲಿ ೧೧ ಕೊಠಡಿ, ೨ ಶೌಚಗೃಹ, ವಿಶೇಷ ಅಗತ್ಯಯುಳ್ಳ ಮಕ್ಕಳಿಗೆ ೧ ಶೌಚಗೃಹ, ಬೇಲೂರು ಗ್ರಾಮದಲ್ಲಿ ೫ ಕೊಠಡಿ, ಕಬ್ಬೆನೂರ ಗ್ರಾಮದಲ್ಲಿ ೧೮ ಕೊಠಡಿಗಳನ್ನು ಉದ್ಘಾಟಿಸಲಾಯಿತು.
ಆರೋಗ್ಯ ಕ್ಷೇಮ ಕೇಂದ್ರ ಉದ್ಘಾಟನೆ:
ಸಂಸದರ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವನೆ ಮೇರೆಗೆ ಎಂಆರ್‌ಪಿಎಲ್ ಕಂಪನಿಯ ಸಿಎಸ್‌ಆರ್ ನಿಽಯ ಕಾರ್ಯಚಟುವಟಿಕೆಯಡಿ ೪೯.೭೩ ಲಕ್ಷ ರೂ. ಅನುದಾನದಲ್ಲಿ ನಿರ್ಮಿತಿ ಕೇಂದ್ರದಿAದ ನಿರ್ಮಾಣಗೊಂಡ ಹಾರೋಬೆಳವಡಿ ಉಪ ಆರೋಗ್ಯ ಕೇಂದ್ರ ಮತ್ತು ಕ್ಷೇಮ ಕೇಂದ್ರದ ಕಟ್ಟಡವನ್ನು ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.