ಧಾರವಾಡ: ಸ್ವಾತಂತ್ರೊೃೀತ್ಸವ ನಿಮಿತ್ತ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದ ಶ್ರೀ ಮಾರುತಿ ಯುವಕ ಮಂಡಳ ವತಿಯಿಂದ ಗ್ರಾಮದಲ್ಲಿ ಮಂಗಳವಾರ ಕೆಸರು ಗದ್ದೆ ಓಟ ಸ್ಪರ್ಧೆ ನಡೆಸಲಾಯಿತು.
ತರುಣರು, ಬಾಲಕರು, ಬಾಲಕಿಯರು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 59 ಜನರು ಭಾಗವಹಿಸಿದ್ದರು. ತರುಣರ ವಿಭಾಗದಲ್ಲಿ ಸಂಜು ಏಣಗಿ (ಪ್ರಥಮ), ಶಂಕರ ಕಡ್ಲಿ (ದ್ವಿತೀಯ) ಸ್ಥಾನ ಪಡೆದರು. ಬಾಲಕರ ವಿಭಾಗದಲ್ಲಿ ಪ್ರಥಮ ತಳವಾರ (ಪ್ರ), ಪ್ರಥಮಸಿಂಗ್ ರಜಪೂತ (ದ್ವಿ) ಹಾಗೂ ಬಾಲಕಿಯರ ವಿಭಾಗದಲ್ಲಿ ವಿದ್ಯಾ ಪಾಟೀಲ (ಪ್ರ) ಹಾಗೂ ವೈಷ್ಣವಿ ತಳವಾರ (ದ್ವಿ) ಸ್ಥಾನ ಪಡೆದರು.
ಗ್ರಾಮದ ಹಿರಿಯರು ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು. ಪಾಲಾಕ್ಷ ಹಾರೋಬಿಡಿ, ಸುರೇಶ ಕಾಟಕರ, ಗುರುನಾಥ ಕಮ್ಮಾರ, ಧರನೇಂದ್ರ ಅಸುಂಡಿ, ಸಿದ್ದನಗೌಡ ಪಾಟೀಲ (ಪೊಲೀಸ್), ಗಿರೀಶ ಭಟ್ಟಂಗಿ, ಬಸವರಾಜ ಹಾರೋಬಿಡಿ, ಚಂದ್ರಶೇಖರ ಕೊಟ್ರಿ, ನಿಂಗಪ್ಪ ಅಮ್ಮನವರ, ಸುರೇಶ ಗುಂಡಣ್ಣವರ, ಗಂಗಪ್ಪ ಕಡ್ಲಿ, ಯುವಕರು, ಗ್ರಾಮಸ್ಥರು, ಇತರರು ಇದ್ದರು