ಚಿತ್ರದುರ್ಗ: ಕಚೇರಿ ಕೆಲಸದ ಒತ್ತಡದ ನಿರ್ವಹಣೆ ಜತೆಗೆ ಆರೋಗ್ಯದ ಬಗ್ಗೆಯೂ ಎಚ್ಚರ ವಹಿಸುವಂತೆ ಮೆದೇಹಳ್ಳಿ ಗ್ರಾಪಂ ಪಿಡಿಒ ಆರ್. ಪಾತಪ್ಪ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಸಲಹೆ ನೀಡಿದರು.
ಚಿತ್ರದುರ್ಗ ತಾಲೂಕು ಗ್ರಾಪಂ ಕ್ಲರ್ಕ್-ಕಂ ಡೇಟಾ ಎಂಟ್ರಿ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘ, ತಾಪಂನಲ್ಲಿ ಗುರುವಾರ ಚಾರ್ಲ್ಸ್ ಬ್ಯಾಬೇಜ್ ಸ್ಮರಣಾರ್ಥ ಹಮ್ಮಿಕೊಂಡಿದ್ದ ಡೇಟಾ ಎಂಟ್ರಿ ಆಪರೇಟರ್‌ಗಳ ದಿನಾಚರಣೆಯಲ್ಲಿ ಮಾತನಾಡಿದರು.
ಗ್ರಾಪಂಗಳಲ್ಲಿ ಇಬ್ಬರು ಗಣಕಯಂತ್ರ ನಿರ್ವಾಹಕರ ಅವಶ್ಯಕತೆ ಇದೆ. ಆಪರೇಟರ್‌ಗಳ ಕಣ್ಣಿನ ಹಿತ ಕಾಪಾಡುವ ಉದ್ದೇಶದಿಂದ ಕಂಪ್ಯೂಟರ್‌ಗಳಿಗೆ ಸ್ಕ್ರೀನ್ ಗಾರ್ಡ್ ವ್ಯವಸ್ಥೆ ಆಗಬೇಕಿದೆ ಎಂದರು.
ತಾಪಂ ಸಹಾಯಕ ನಿರ್ದೇಶಕಿ ಆರ್. ರೂಪಕುಮಾರಿ ಮಾತನಾಡಿ, ಆಪರೇಟರ್‌ಗಳನ್ನು ಪ್ರೋತ್ಸಾಹಿಸಲು ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ಇದೆ ಎಂದರು.
ಸೊಂಡೆಕೊಳ ಡೇಟಾ ಆಪರೇಟರ್ ಮಂಜಪ್ಪ ಅಧ್ಯಕ್ಷತೆ ವಹಿಸಿದ್ದರು. ತಾಪಂ ವ್ಯವಸ್ಥಾಪಕ ಇರ್ಫಾನ್, ಯೋಜನಾಧಿಕಾರಿ ಡಿ. ರಾಘವೇಂದ್ರ, ಸಹಾಯಕ ಲೆಕ್ಕಾಧಿಕಾರಿ ಕೆಂಚಪ್ಪ, ಕಂಪ್ಯೂಟರ್ ಆಪರೇಟರ್ ಮಹೇಶ್, ನೌಕರರ ಸಂಘದ ನಿರ್ದೇಶಕರಾದ ಎನ್. ಮಾರುತಿ, ನಿಜಪ್ಪ, ಸೊಂಡೆಕೊಳ ಪಿಡಿಒ ಬಿ.ಕೆ. ನಾಸೀರ್‌ಪಾಷಾ, ಎಂಐಎಸ್ ಸಂಯೋಜಕ ಉಮೇಶ್, ತಾಂತ್ರಿಕ ಸಂಯೋಜಕ ಪ್ರತಾಪ್, ಐಇಸಿ ಸಂಯೋಜಕ ಸತ್ಯನಾರಾಯಣ, ಸಂಘದ ಜಿಲ್ಲಾಧ್ಯಕ್ಷ ಜಿ. ಜಗದೀಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಿವಮ್ಮ ಮತ್ತಿತರರು ಇದ್ದರು.
ಡಿ.ಎಸ್.ಹಳ್ಳಿ ಗ್ರಾಂಪಂ ಆಪರೇಟರ್ ಅಶ್ವಥ್ ಸ್ವಾಗತಿಸಿ, ನಿರೂಪಿಸಿದರು.