ಜಿಲ್ಲೆ

ಕೆಲಸಗಳ ಮೂಲಕ ಜನರ ವಿಶ್ವಾಸ ಉಳಿಸುವೆ


ಯಾದಗಿರಿ: ನನ್ನ ಮುಂದಿನ 5 ವರ್ಷದ ಅವಧಿ ಕ್ಷೇತ್ರ ಹಾಗೂ ಜನರ ಅಭಿವೃದ್ಧಿಗೆ ಮೀಸಲಾಗಿರುತ್ತದೆ. ಜನರು ಕೊಟ್ಟ ತೀಪರ್ಿಗೆ ಕಂಕಣಬದ್ಧವಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಮೂಲಕ ಜನರ ವಿಶ್ವಾಸ ಉಳಿಸುವೆ ಎಂದು ಸಣ್ಣ ಕೈಗಾರಿಕೆಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ಹೇಳಿದರು.

ಶಹಾಪುರ ನಗರದ ಕುಂಬಾರಗೇರಿಯ ಹಿರೇಮಠದಲ್ಲಿ ತಾಲೂಕ ಕುಂಬಾರ ಸಮಾಜದ ವತಿಯಿಂದ ಆಯೋಜಿಸಲಾದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸರಕಾರದ ಜನಪರ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ ಯೋಜನೆಗಳು ನಿಜವಾಗಿಯೂ ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ಮುಟ್ಟುತ್ತಿದೆಯೇ, ಇದರಿಂದ ಅವರಿಗಾಗಿರುವ ಅನುಕೂಲ, ಅವರ ಅಭಿಪ್ರಾಯ ಇವೇ ಮುಂತಾದ ಮಾಹಿತಿಯನ್ನು ನೇರವಾಗಿ ಫಲಾನುಭವಿಗಳಿಂದಲೇ ಪಡೆಯುವುದರಿಂದ ಇನ್ನಷ್ಟು ಜನಪರ ಕೆಲಸ ಮಾಡಲು ಈ ಈ ಕ್ಷೇತ್ರದ ಜನರ ಜತೆ ನಿರಂತರ ಸಂಪರ್ಕದಲ್ಲಿ ಇರುವದಾಗಿ ತಿಳಿಸಿದರು.

ಪೀಠಾಪತಿ ಸೂಗುರೇಶ್ವರ ಶಿವಾಚಾರ್ಯರು, ಸಿದ್ದರಾಮಪ್ಪ ಕೆರವಟಿಗಿ, ವೀರಶೈವ ಸಮಾಜದ ಮುಖಂಡ ಬಸವರಾಜ್ ಹೇರುಂಡಿ, ದೇವಿಂದ್ರಪ್ಪ ಕರಡಕಲ್, ಹಿರಿಯ ಸಾಹಿತಿ ಶಿವಣ್ಣ ಇಜೇರಿ ಇದ್ದರು.