ರಾಮದುರ್ಗ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಸಮಾರಂಭದ ಅಧ್ಯತೆ ವಹಿಸಿ ಗೆಬು ಜೈನೇಖಾನ್​ ಮಾತನಾಡಿದರು. ಕೃಷ್ಣಾ ಹೊಸೂರ, ತುಳಸಮ್ಮ ಮಾಳದಕರ, ಕೇಶವ ದಾಸರ, ಶಂಕ್ರಮ್ಮ ಪಾಟೀಲ ಇತರರಿದ್ದರು. 
ಜಿಲ್ಲೆ

ಕೆಲಸಕ್ಕೆ ತಕ್ಕಂತೆ ವೇತನ ಸಿಗಲಿ

ರಾಮದುರ್ಗ: ಸಂಪತ್ತು ಸೃಷ್ಟಿಸುವ ಕಾರ್ಮಿಕ ಹಾಗೂ ದೇಶಕ್ಕೆ ಆಹಾರ ನೀಡುವ ರೈತನ ಶ್ರಮಕ್ಕೆ ತಕ್ಕ ಬೆಲೆ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ. ದುಡಿಯುವವ ಹಾಗೂ ರೈತ ಸಮುದಾಯದ ಹಿತಾಸಕ್ತಿ ಕಡೆಗಣಿಸಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ ಎಂದು ಕಾರ್ಮಿಕ ಮುಖಂಡ ಜಿ.ಎಂ.ಜೆನೇಖಾನ್​ ಹೇಳಿದರು.

ಪಟ್ಟಣದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಸಮಾರಂಭದ ಅಧ್ಯತೆ ವಹಿಸಿ ಅವರು ಮಾತನಾಡಿದರು. 1886ರಲ್ಲಿ ಅಮೆರಿಕಾದ ಚಿಕಾಗೋ ನಗರದಲ್ಲಿ 8 ಗಂಟೆ ಕೆಲಸ, ಸರಿಯಾದ ವೇತನ ಹಾಗೂ ಇನ್ನಿತರ ಬೇಡಿಕೆಗಳಿಗಾಗಿ ಒತ್ತಾಯಿಸಿ ಕಾರ್ಮಿಕರು ನಡೆಸಿದ ಸುದೀರ್ ಹೋರಾಟದಲ್ಲಿ ಮಾಲೀಕರ ಕುಮ್ಮಕ್ಕಿನಿಂದ ಪೊಲೀಸರು ಪ್ರತಿಭಟನಾನಿರತರ ಮೇಲೆ ಗೋಲಿಬಾರ್​ ನಡೆಸಿದ್ದರು. ಅಲ್ಲದೆ 11 ಜನ ಮುಖಂಡರನ್ನು ಜೈಲಿಗೆ ಹಾಕಿ 4 ಜನರಿಗೆ ಗಲ್ಲು ಶಿೆ ನೀಡಿದರು. ಈ ಇತಿಹಾಸವೇ ಇಂದು ಮೇ 1 ದಿನಾಚರಣೆ ಅಥವಾ ಕಾರ್ಮಿಕ ದಿನಾಚರಣೆಯಾಗಿದೆ. ಕಾರ್ಮಿಕರು ಗುಲಾಮರಲ್ಲ ಅವರು ಮಾಡುವ ಕೆಲಸಕ್ಕೆ ತಕ್ಕಂತೆ ವೇತನ ಸಿಗುತ್ತಿಲ್ಲ. ನಾವೆಲ್ಲರೂ ಚಿಕಾಗೋ ನಗರದಲ್ಲಿ ನಡೆಸಿದಂತಹ ಹೋರಾಟಕ್ಕೆ ಸಜ್ಜಾಗಬೇಕೆಂದರು.

ಮುಖಂಡರಾದ ನಿಖಿಲ ಕುಲಕರ್ಣಿ ಹಾಗೂ ನಾಗಪ್ಪ ಸಂಗೊಳ್ಳಿ ಮಾತನಾಡಿ, ಬೆಲೆ ಏರಿಕೆ ದಿನಗಳಲ್ಲಿ ಕಾರ್ಮಿಕ ತನ್ನ ಶ್ರಮಶಕ್ತಿ ಮಾರಿಕೊಂಡರೂ ಕೊಂಡುಕೊಳ್ಳುವ ಶಕ್ತಿ ಕಳೆದುಕೊಂಡಿದ್ದಾನೆ. ಶ್ರಮಶಕ್ತಿಗೆ ಅನುಗುಣವಾಗಿ ವೇತನ ಸಿಗಬೇಕು. ಕಾರ್ಮಿಕರಿಗೆ ಆಗುವಂತಹ ಶೋಷಣೆ ಹೋಗಲಾಡಿಸಲು ಹೋರಾಟ ಮಾಡಬೇಕಿದೆ ಎಂದರು.

ಸಂದ ಮುಖಂಡ ಕೃಷ್ಣಾ ಹೊಸೂರ, ಅರ ದಾಸೋಹ ನೌಕರರ ಸಂದ ತುಳಸಮ್ಮ ಮಾಳದಕರ, ಪಂಚಾಯಿತಿ ನೌಕರರ ಸಂದ ಮುಖಂಡ ಕೇಶವ ದಾಸರ, ಕಟ್ಟಡ ಕಾರ್ಮಿಕರ ಸಂದ ಮುಖಂಡ ಮಾರುತಿ ಮುದಗುರಿ, ಡಬ್ಬಾ ಅಂಗಡಿಕಾರರ ಸಂದ ಮುಖಂಡ ಾರೂಖ್​ ಶೇಖ್​, ಶಂಕ್ರಮ್ಮ ಪಾಟೀಲ, ರೇಖಾ ಪೂಜಾರ, ಸುಲೇಮಾನ್​ ಪೈಲ್ವಾನ್​, ಲಕ್ಷ$್ಮಣ ಮದ್ಲೂರ, ದಾದಾ ಪಾಗದ ಸೇರಿ ಇತರರಿದ್ದರು. ಅಂಗನವಾಡಿ ನೌಕರ ಸಂದ ಅಧ್ಯೆ ಸರಸ್ವತಿ ಮಾಳಶೆಟ್ಟಿ ಸ್ವಾಗತಿಸಿ ವಂದಿಸಿದರು.