ಜಿಲ್ಲೆ

ಕೆಲವೊಂದು ಕುಟುಂಬಗಳಿಗೆ ಶ್ವಾನಗಳು ಸದಸ್ಯರಿದ್ದಂತೆ : ಭವಾನಿ ರೇವಣ್ಣ

ಹಾಸನ: ಕೆಲವೊಂದು ಕುಟುಂಬಗಳಿಗೆ ಸ್ವನಗಳು ಸದಸ್ಯರಿದ್ದಂತೆ ಅವುಗಳನ್ನು ಮಕ್ಕಳಂತೆ ಪ್ರೀತಿಯಿಂದ ಪೋಷಿಸಿದರೆ ನಮ್ಮ ಮನೆ ಮತ್ತು ನಮ್ಮನ್ನು ನಿಯತ್ತಿನಿಂದ ಕಾಯುತ್ತದೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಭವಾನಿ ರೇವಣ್ಣ ತಿಳಿಸಿದರು.

ನಗರದ ಸರ್ಕಾರಿ ವಿಜ್ಞಾನ ಕಾಲೇಜು ಆವರಣದಲ್ಲಿ ಭಾನುವಾರ ಹಾಸನ ಕೆನಲ್ ಕ್ಲಬ್ ವತಿಯಿಂದ  ಸ್ವದೇಶಿ ಮತ್ತು ವಿದೇಶಿ ತಳಿ ಶ್ವಾನಗಳ 3ನೇ ವರ್ಷದ  ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದ್ದು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶ್ವಾನ ಪ್ರಿಯರು ತಮ್ಮ ಮನೆಯ ವಿವಿಧ ರೀತಿಯ ಶ್ವಾನಗಳನ್ನು ಇಂದು ಪ್ರದರ್ಶನಕ್ಕೆ ಕರೆತಂದಿರುವುದು ಸಂತಸದ ವಿಚಾರವಾಗಿದ್ದು, ಮುಂದಿನ ವರ್ಷದಲ್ಲಿ  ಕೆನಲ್ ಸಂಸ್ಥೆಯು ಶ್ವಾನ ಪ್ರದರ್ಶನ ಏರ್ಪಡಿಸಿದರೇ ಕೈಲಾದ ಸಹಾಯ ಮಾಡಲಾಗುವುದು ಎಂದರು.

ಅಲ್ಲದೆ ಮುಂದಿನ ಭಾರಿಪ್ರದರ್ಶನ ಏರ್ಪಡಿಸಿದರೆ ನಮ್ಮ ತೋಟದ ಸಾಕಿರುವ 9 ತಳೀಯ ಎಲ್ಲಾ ಶ್ವಾನಗಳು ಪ್ರದರ್ಶನಕ್ಕೆ ಕರೆತರಲಾಗುವುದು. ಶ್ವಾನಗಳನ್ನು ಪ್ರೀತಿಯಿಂದ ಮನೆಯಲ್ಲಿ ಸಾಕಿದರೇ ಅದು ನಮ್ಮನ್ನು ಕಾಯುತ್ತದೆ ಎಂದ ಅವರು ಮುಂದಿನ ವರ್ಷ ಇನ್ನು ದೊಡ್ಡಮಟ್ಟದ ಶ್ವಾನ ಪ್ರದರ್ಶನ ಏರ್ಪಡಿಸಲಿ ಎಂದು ಶುಭ ಹಾರೈಸಿದರು.

ಶ್ವಾನ ಪ್ರದರ್ಶನಕ್ಕೆ ಮಾಡಲಾಗಿದ್ದ ಮೈದಾನದಲ್ಲಿ ಸ್ವದೇಶಿ ಮತ್ತು ವಿದೇಶಿ ತಳಿಯ ಒಟ್ಟು 300ಕ್ಕೂ ಹೆಚ್ಚಿನ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಉತ್ತಮ ಶ್ವಾನಗಳಿಗೆ ಬಹುಮಾನಗಳನ್ನು ವಿತರಿಸಿ ಗೌರವಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ನಗರಸಭೆ ಸದಸ್ಯ ವಾಸುದೇವ್, ನವೀನ್ ನಾಗರಾಜು, ಜೆಡಿಎಸ್ ಮುಖಂಡ ಕಾರ್ಲೇ ಇಂದ್ರೇಶ್, ಗೊರೂರು ರಾಜು, ಗಿರೀಶ್, ಫೈರೋಜ್, ಪ್ರಾಧ್ಯಾಪಕ ಡಾ. ಮಂಜುನಾಥ್, ಪಶು ವೈದ್ಯಕೀಯ ವೈದ್ಯ ಜನಾರ್ಧನ್, ತೀರ್ಪುಗಾರ ವಿಶ್ವಾಸ್, ಹಾಸನ್ ಕೆನಲ್ ಕ್ಲಬ್ ಅಧ್ಯಕ್ಷ ಎಚ್.ಎಂ. ರಾಘವೇಂದ್ರ, ಕ್ಲಬ್ ಜಂಠಿ ಕಾರ್ಯದರ್ಶಿ ಪ್ರೀತಂ ವಾಲ್ಟನ್, ಸದಸ್ಯ ಕೆ. ಮೋಹನ್ ಕುಮಾರ್, ಕೆ. ಅನಿಲ್ ಕುಮಾರ್ ಇತರರು ಇದ್ದರು.