ಜಿಲ್ಲೆ

ಕೆರೆಹಕ್ಲು-ಮೇಲ್ಪಾಲ್ ರಸ್ತೆ ಸಂಪರ್ಕ ಕಡಿತ

ಬಾಳೆಹೊನ್ನೂರು: ನಿರಂತರ ಮಳೆಗೆ ಗುಡ್ಡ ಜರಿದು ಹಿರೇಗದ್ದೆ ಗ್ರಾಪಂನ ಕೆರೆಹಕ್ಲು-ಮೇಲ್ಪಾಲ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕೆರೆಹಕ್ಲು ಗ್ರಾಮದಲ್ಲಿ ಸುಮಾರು 200 ಮೀಟರ್ ಜಾಗದಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಜರಿದಿರುವುದರಿಂದ ಎಚ್.ಬಿ.ರಾಜಗೋಪಾಲ್ ಎಂಬುವರ ಅರ್ಧ ಎಕರೆ ಕಾಫಿ ತೋಟ ನಾಶವಾಗಿದೆ. ಮಂಗಳವಾರ ಮಳೆ ಪ್ರಮಾಣ ಕ್ಷೀಣಿಸಿದ್ದು ಬೆಳಗ್ಗಿನಿಂದ ಸಂಜೆಯವರೆಗೂ ಬಿಸಿಲಿನ ವಾತಾವರಣವಿತ್ತು. ರೈತರು ಅಡಕೆಗೆ ಬೋಡೋ ದ್ರಾವಣ ಸಿಂಪಡಿಸುತ್ತಿದ್ದಾರೆ.