ಗುಂಡ್ಲುಪೇಟೆ: ತಾಲೂಕಿನ ಕೆಬ್ನೇಪುರ ಸಮೀಪದ ಕೆರೆಯೊಂದರಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ.
ಗ್ರಾಮದ ಮಲ್ಲಯ್ಯನಕಟ್ಟೆಯಲ್ಲಿ ಹುಲಿಯ ಕಳೇಬರವನ್ನು ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ,
ಕೂಡಲೇ ಸ್ಥಳಕ್ಕೆ ಗುಂಡ್ಲುಪೇಟೆ ಉಪವಿಭಾಗದ ಎಸಿಎಫ್ ಸಿ.ರವೀಂದ್ರ, ಕುಂದಕೆರೆ ವಲಯದ ಆರ್ ಎಫ್ ಒ ಶ್ರೀನಿವಾಸನಾಯ್ಕ ಭೇಟ್ನಿೀಡಿ ಪರಿಶೀಲಿಸಿದರು. ಸಂಜೆಯಾದ್ದರಿಂದ ನಾಳೆ ಹೊರತೆಗೆಯಲು ನಿರ್ಧರಿಸಿದರು.
ಎರಡು ದಿನದ ಹಿಂದೆ ನೀರಿಗ್ೆ ಬಿದ್ದು ಸಾವಿಗಿಡಾದ ಹುಲಿಯ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.