ಜಿಲ್ಲೆ

ಕೆರೆಯಲ್ಲಿ ಜಾರಿ ಬಿದ್ದು ಯುವಕ ಸಾವು

ವಿಜಯವಾಣಿ ಸುದ್ದಿಜಾಲ ಹಳಿಯಾಳ
ತಾಲೂಕಿನ ಮದ್ನಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆರೆಯಲ್ಲಿ ಆಕಸ್ಮಿಕವಾಗಿ ಕಾಲುಜಾರಿಬಿದ್ದು ಯುವಕನೊರ್ವ ದಾರುಣವಾಗಿ ಸಾವು ಕಂಡಿರುವ ದುರ್ಘಟನೆ ಮಂಗಳವಾರ ಸಂಭವಿಸಿದೆ.
ಮದ್ನಳ್ಳಿ ಗ್ರಾಮದ ರಹವಾಸಿ ಕಾರ್ತಿಕ ಬಡಿಗೇರ(20) ಕೆರೆಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಮೃತನಿಗೆ ಓರ್ವ ಹಿರಿಯ ಸಹೋದರಿ, ಓರ್ವ ಸಹೋದರ, ತಂದೆ, ತಾಯಿ ಇದ್ದಾರೆ.
ಕೆರೆಯಲ್ಲಿ ಮಧ್ಯಾಹ್ನ ಮುಳುಗಿರುವ ಯುವಕನ ಶವ ಪತ್ತೆಗಾಗಿ ಸಾಯಂಕಾಲದ ವರೆಗೂ ಗ್ರಾಮಸ್ಥರು, ಸ್ಥಳೀಯ ನುರಿತ ಈಜುಗಾರರು ಹಾಗೂ ಅಗ್ನಿಶಾಮಕ ದಳದವರು ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಹಳಿಯಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.