ಬೇಲೂರು ತಾಲೂಕಿನ ಹಳೇ ಹಗರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಪುಷ್ಪಗಳಿಂದ ಸಿಂಗರಿಸಿದ್ದ ಎತ್ತಿನ ಗಾಡಿಯಲ್ಲಿ ವಿಸರ್ಜಿಸಲು ಕೊಂಡೊಯ್ಯುತ್ತಿರುವುದು 
ಜಿಲ್ಲೆ

ಕೆರೆಯಲ್ಲಿ ಗಣೇಶಮೂರ್ತಿ ವಿಸರ್ಜನೆ

ಬೇಲೂರು: ಬೇಲೂರು ತಾಲೂಕಿನ ಹಳೇ ಹಗರೆ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಭಕ್ತರ ಸಮ್ಮುಖದಲ್ಲಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಯಿತು. ಗುರುವಾರ ಜೋಡಿ ಎತ್ತಿನ ಗಾಡಿಯಲ್ಲಿ ಗಣೇಶನನ್ನು ಕೂರಿಸಿ ವಿವಿಧ ಪುಷ್ಪಗಳಿಂದ ಮಂಟಪವನ್ನು ಸಿಂಗರಿಸಿ ಹಗರೆಯ ಪ್ರಮುಖ ಬೀದಿಗಳಲ್ಲಿ ವಾದ್ಯ ಮೇಳದೊಂದಿಗೆ ಮೆರವಣಿಗೆ ನಡೆಸಿ ಗ್ರಾಮದ ಕೆರೆಯಲ್ಲಿ ಭಕ್ತರ ಸಮ್ಮುಖದಲ್ಲಿ ವಿಸರ್ಜಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.