ಕುಣಿಗಲ್: ಪಟ್ಟಣದ ದೊಡ್ಡಕೆರೆಗೆ ಗುರುವಾರ ಬೆಳಗ್ಗೆ ಇಂಜಿನಿಯರ್ವೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದ್ದು, ತಾಲೂಕಿನ ಕೊತ್ತಗೆರೆ ಹೋಬಳಿ ಸೊಬಗಾನಹಳ್ಳಿ ಗ್ರಾಮದ ವಾಸಿ ಬಿ.ಟಿ.ಸುಮಾ (22) ನಾಪತ್ತೆಯಾದವರೆಂದು ಶಂಕಿಸಲಾಗಿದೆ. ಬೆಂಗಳೂರಿನ ಮಡಿವಾಳದ ಖಾಸಗಿ ಕಾರ್ಖಾನೆಯ ಉದ್ಯೋಗಿಯಾಗಿರುವ ಸುಮಾ ಗ್ರಾಮದಿಂದ ಗುರುವಾರ ಬೆಳಗ್ಗೆ 7 ಗಂಟೆಗೆ ಕುಣಿಗಲ್ನಿಂದ ಬೆಂಗಳೂರಿಗೆ ಸಾರಿಗೆ ಸಂಸ್ಥೆ ಬಸ್ನಲ್ಲಿ ಹೋಗಿದ್ದಾರೆ. ಆದರೆ, ಮತ್ತೆ ಬೆಳಗ್ಗೆ 11 ಗಂಟೆಗೆತುರುವೇಕೆರೆ ಬಸ್ನಲ್ಲಿ ಕುಣಿಗಲ್ಗೆ ಬಂದಿರುವುದು ಸಾರಿಗೆ ಸಂಸ್ಥೆ ಬಸ್ ಟಿಕೆಟ್ನಿಂದ ದೃಢವಾಗಿದೆ. ಸುಮಾ ಅವರ ಬ್ಯಾಗ್, ಆಧಾರ್ ಕಾರ್ಡ್, ಮೊಬೆಲ್ ಹಾಗೂ ಚಪ್ಪಲಿ ಕುಣಿಗಲ್ ದೊಡ್ಡಕೆರೆಯ ಏರಿಯ ಸತ್ಯ ಗಣಪತಿ ದೇವಾಲಯ ಮುಂಭಾಗದ ಜಾಕ್ ವೆಲ್ ಬಳಿ ಸಿಕ್ಕಿದ್ದು, ಸುಮಾ ಕೆರೆಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸಂಶಯ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ಬೋಟ್ ಸಹಾಯದಿಂದ ಕೆರೆಯಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಶುಕ್ರವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಯಲಿದೆ. ಸ್ಥಳಕ್ಕೆ ಶಾಸಕ ಡಾ.ಎಚ್.ಡಿ.ರಂಗನಾಥ್, ಕುಣಿಗಲ್ ವೃತ್ತ ನಿರೀಕ ಎಸ್.ಬಿ.ನವೀನ್ಗೌಡ ಭೇಟಿ ನೀಡಿ ಪರಿಶೀಲಿಸಿದರು.