ನಿಡಸೋಸಿಯಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಈಚೆಗೆ ನಿಧನರಾದ ಸಚಿವ ಉಮೇಶ ಕತ್ತಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದುಂಡಪ್ಪ ಹೆದ್ದೂರಿ, ಎ.ಎಸ್.ಪಾಟೀಲ, ಶಿವಾನಂದ ಕರೋಶಿ, ದುಂಡಪ್ಪ ಬಸ್ಸಾಪುರಿ, ಅಪ್ಪಾಸಾಹೇಬ ಹವಾಲ್ದಾರ, ಶಿವಾನಂದ ಪದ್ಮಣ್ಣವರ, ಗಜಾನನ ಬಾಡ ಇತರರಿದ್ದರು. 
ಜಿಲ್ಲೆ

ಕೆರೆಗೆ ಸಚಿವ ಉಮೇಶ ಹೆಸರಿಡಿ

ಸಂಕೇಶ್ವರ: ಸಮೀಪದ ಕಮತನೂರ ಕೆರೆಗೆ ಸಚಿವ ಉಮೇಶ ಕತ್ತಿ ಅವರ ಹೆಸರಿಡಬೇಕು ಎಂದು ಹಿರಿಯ ಧುರೀಣ ದುಂಡಪ್ಪ ಹೆದ್ದೂರಿ ಒತ್ತಾಯಿಸಿದ್ದಾರೆ.

ಸಮೀಪದ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಭವಿಷ್ಯಕ್ಕೆ ಬೆಳಕು ಒದಗಿಸಿಕೊಟ್ಟ ಅವರ ಕಾರ್ಯ ಸದಾ ಸ್ಮರಣೀಯ ಎಂದರು. ಸಂಘದ ಅಧ್ಯಕ್ಷ ಎ.ಎಸ್.ಪಾಟೀಲ ಮಾತನಾಡಿ, ಪಂಚಮ ಶಿವಲಿಂಗೇಶ್ವರ ಶ್ರೀ ಆಶೀರ್ವಾದ, ಕತ್ತಿ ಸಹೋದರರ ಮಾರ್ಗದರ್ಶನ ಹಾಗೂ ಸಂಸ್ಥಾಪಕ ದುಂಡಪ್ಪ ಹೆದ್ದೂರಿ ನೇತೃತ್ವದಲ್ಲಿ ಸಂಘ ಸ್ವಂತ ಕಟ್ಟಡ ಹೊಂದುವ ಜತೆಗೆ ಈ ಭಾಗದ ರೈತರ ಆರ್ಥಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿ ಯಶಸ್ವಿಯಾಗಿ ಮುನ್ನಡೆದಿದೆ ಎಂದರು. ಕಾರ್ಯದರ್ಶಿ ಬಿ.ಎಸ್.ಮದಿಹಳ್ಳಿ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಶಿವಾನಂದ ಕರೋಶಿ, ಸಂಘದ ನಿರ್ದೇಶಕರಾದ ದುಂಡಪ್ಪ ಬಸ್ಸಾಪುರಿ, ಅಪ್ಪಾಸಾಹೇಬ ಹವಾಲ್ದಾರ, ಶಿವಾನಂದ ಪದ್ಮಣ್ಣವರ, ಗಜಾನನ ಬಾಡ, ಸಿಕಂದರ್ ಜಮಾದಾರ್, ದುರದುಂಡಿ ಕೆಂಗಾರ, ರವಿ ಪದ್ಮಣ್ಣವರ, ಬಸವರಾಜ ಮಾಳಿ, ಸುಭಾಷ ಪಾಟೀಲ, ಬಸಗೌಡ ಪಾಟೀಲ, ರಾಮಕೃಷ್ಣ ಪರಸನ್ನವರ, ಶಂಕರ ಮಾದನ್ನವರ, ಬಸವರಾಜ ಬಂತಿ, ದುಂಡಪ್ಪ ಅಮ್ಮಿನಬಾವಿ, ಕಲ್ಲಪ್ಪಾ ಸೂಜಿ, ಮಹಾಲಿಂಗ ಕುಂಬಾರ, ನಿಜಲಿಂಗ ಹೂಗಾರ ಇತರರಿದ್ದರು.