ಚಿಕ್ಕಮಗಳೂರು: ಪಂಚಭೂತಗಳಲ್ಲಿ ಒಂದಾದ ಕೆರೆಯ ನೀರು ದೇವತೆಗಳಿಗೆ ಸಮಾನ. ಕಲುಷಿತ ಅಥವಾ ಮಾಲಿನ್ಯ ಉಂಟಾಗುವ ಪದಾರ್ಥಗಳನ್ನು ಹಾಕದೇ ಅಚ್ಚುಕಟ್ಟಿನಿಂದ ಕೆರೆಗಳನ್ನು ಕಾಪಾಡುವುದು ಗ್ರಾಮಸ್ಥರ ಕರ್ತವ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ತಾಲೂಕಿನ ನೆಟ್ಟೆಕೆರೆಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆ, ಕರ್ತಿಕೆರೆ ಗ್ರಾಪಂ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ೭೯೫ನೇ ಕೆರೆ ಹಸ್ತಾಂತರ ಕಾರ್ಯಕ್ರಮದ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಜನೋಪಯೋಗಿ ಕಾರ್ಯದಲ್ಲಿ ಧರ್ಮಸ್ಥಳ ಟ್ರಸ್ಟ್ ತನ್ನನ್ನು ತಾನು ತೊಡಗಿಸಿಕೊಂಡಿದೆ. ದೇವಾಲಯ ಜೀರ್ಣೋದ್ದಾರ, ಅನುದಾನ ನಿಧಿ, ವಾತ್ಸಲ್ಯ ಮನೆ, ಕೆರೆಗಳ ಅಭಿವೃದ್ಧಿಯಂಥ ಧರ್ಮಕಾರ್ಯಗಳಿಂದ ವೀರೇಂದ್ರ ಹೆಗ್ಗಡೆಯವರು ಜನಮನ್ನಣೆ ಗಳಿಸಿ ನಡೆದಾಡುವ ದೇವರಾಗಿದ್ದಾರೆ ಎಂದರು.
ಸಮಾಜಕ್ಕೆ ಕೊಡುಗೆ ನೀಡಲು ಕೆಲವರು ಮುಂದಾಗುವುದಿಲ್ಲ. ಟ್ರಸ್ಟ್ ಅಥವಾ ಸಂಘ-ಸAಸ್ಥೆಗಳ ಕೊಡುಗೆಯನ್ನು ಸಹಿಸÀÄವುದಿಲ್ಲ. ನೈಜವಾಗಿ ಹೊಟ್ಟೆ ನೋವಿಗೆ ವೈದ್ಯರಲ್ಲಿ ಔಷಧವಿದೆ. ಆದರೆ ಹೊಟ್ಟೆಕಿಚ್ಚಿಗೆ ಔಷಧವಿಲ್ಲ. ಹೀಗಾಗಿ ಜನೋಪಯೋಗಿ ಕಾರ್ಯಗಳತ್ತ ಹೆಜ್ಜೆ ಹಾಕುವವರ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಜಗತ್ತಿನಲ್ಲಿ ಗಾಳಿ, ನೀರು, ಅಗ್ನಿ, ಭೂಮಿ, ವಾಯು ಪಂಚಭೂತಗಳಿAದ ಕೂಡಿದೆ. ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ ನಮ್ಮ ಪೂರ್ವಿಕರು ಪಂಚಭೂತಗಳನ್ನು ದೈವ ಸ್ವರೂಪಿಯಲ್ಲಿ ಪೂಜಿಸುವ ಸಂಸ್ಕೃತಿ ಚಾಲ್ತಿಯಲ್ಲಿದ್ದು, ಮಾನವರು ಕೆರೆಗಳನ್ನು ಮಾಲಿನ್ಯಗೊಳಿಸದೇ ಸ್ವಚ್ಚತೆಯಿಂದ ಕಾಪಾಡಬೇಕು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ಮಾತನಾಡಿ, ಕೆರೆಗಳು ಗ್ರಾಮಸ್ಥರ ಪಾಲಿಗೆ ವರದಾನವಾಗಿದೆ. ಸುಮಾರು ೧೧ ಲಕ್ಷ ರೂ.ಗಳ ವೆಚ್ಚದಲ್ಲಿ ಅಭಿವೃದ್ದಿಗೊಳಿಸಿರುವ ಹಿನ್ನೆಲೆಯಲ್ಲಿ ಸುರಕ್ಷತೆ ಹಾಗೂ ಸ್ವಚ್ಚತೆಯಿಂದ ಕಾಪಾಡುವ ಜವಾಬ್ದಾರಿ ಗ್ರಾಮಸ್ಥರು ನಿರ್ವಹಿಸಿದರೆ ಧರ್ಮಸ್ಥಳ ಸಂಸ್ಥೆ ಮಾಡಿರುವ ಕಾರ್ಯ ಸಾರ್ಥಕವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ತಿಕೆರೆ ಗ್ರಾಪಂ ಅಧ್ಯಕ್ಷೆ ಭಾಗ್ಯ ಶ್ರೀನಿವಾಸ್, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ತಾಪಂ ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ಪಿಡಿಓ ಪ್ರೇಮಾ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ನಾಗೇಶ್ , ಮೂರ್ತಿ, ರೈತ ಸಂಘದ ಸುನಿಲ್, ಕೃಷ್ಣೇಗೌಡ, ತಾಲೂಕು ಯೋಜನಾಧಿಕಾರಿ ರಮೇಶ್ , ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್, ಜನ ಜಾಗೃತಿ ಸದಸ್ಯರಾದ ಅನಿಲ್ ಆನಂದ್, ಮಂಜುನಾಥ್, ಕುಮಾರ್, ನಜ್ಮಾ ಮತ್ತಿತರರಿದ್ದರು.