ಹುಮನಾಬಾದ್: ಕೇಂದ್ರ ಮತ್ತು ರಾಜ್ಯ ಸಕರ್ಾರದ ನಿದರ್ೇಶನದಂತೆ ಆಜಾದಿ ಕಾ ಅಮೃತ್ ಮಹೋತ್ಸವದ ಆಚರಣೆಯ ಭಾಗವಾಗಿ ತಾಲೂಕಿನಲ್ಲಿ 10 ಕೆರೆಗಳನ್ನು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಭಿವೃದ್ದಿ ಮಾಡಲಾಗುತ್ತಿದೆ ಎಂದು ತಾಪಂ ಇಒ ಗೋವಿಂದರಾವ ತಿಳಿಸಿದರು.
ನಂದಗಾಂವ ಗ್ರಾಮದಲ್ಲಿ ನಡೆಯುತ್ತಿರುವ ರಾಮತೀರ್ಥ ಕೆರೆ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದ ಅವರು, 75ನೇ ಸ್ವಾತಂತ್ರೃ ಮಹೋತ್ಸವ ಸವಿ ನೆನಪಿಗಾಗಿ ಅಮೃತ ಸರೋವರಗಳು ಎಂದು ನಾಮಕರಣ ಮಾಡಿದ್ದು, 15ರಂದು ಸ್ವಾತಂತ್ರ್ಯ ಹೋರಾಟಗಾರರು ಅಥವಾ ಅವರ ಕುಟುಂಬದ ಸದಸ್ಯರಿಂದ ಮತ್ತು ಸ್ಥಳೀಯ ಗ್ರಾಪಂನ ಹಿರಿಯ ನಾಗರಿಕರಿಂದ ಕೆರೆಗಳ ಮುಂದೆ ಧ್ವಜಾರೋಹಣ ಮಾಡಿ ಸ್ವಾತಂತ್ರೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಅಮೃತ ಸರೋವರ ಯೋಜನೆಯಡಿ ನಿಮರ್ಾಣವಾದ ಕೆರೆಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುವುದು, ಹಸಿರು ಹುಲ್ಲು ನೆಟ್ಟು ಹಸಿರನ್ನು ಅಭಿವೃದ್ಧಿಪಡಿಸಲಾಗುವುದು ಹಾಗೂ ಕೆರೆಯ ಸುತ್ತಮುತ್ತ ಮರಗಿಡಗಳನ್ನು ಬೆಳೆಸುವುದರ ಜತೆಗೆ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಆಸನಗಳನ್ನು ನಿಮರ್ಿಸಲಾಗುವುದು ಎಂದು ಹೇಳಿದರು.
ಪರಿಸರ ಸಂರಕ್ಷಣೆಯ ಮತ್ತು ನಿಸರ್ಗ ಸಂಸ್ಕೃತಿ ಕಾಪಾಡುವ ಉದ್ದೇಶದಿಂದ ಹಾಗೂ ಗ್ರಾಮದ ನರೇಗಾ ಕೂಲಿ ಕಾಮರ್ಿಕರು ಆಥರ್ಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ವಿಶೇಷ ಆದ್ಯತೆ ನೀಡಲಾಗಿದೆ. ಗ್ರಾಮೀಣ ಸಮುದಾಯದಲ್ಲಿ ಸಮರ್ಪಕ ನೀರಿನ ಸಂರಕ್ಷಣೆ, ಸದ್ಬಳಕೆ ಕುರಿತಂತೆ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಗ್ರಾಮಸ್ಥರಿಗೆ ಜಲಮೂಲ ಮತ್ತು ಜಲಸಂರಕ್ಷಣೆ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ತಾಪಂ ತಾಂತ್ರಿಕ ಸಂಯೋಜಕ ಶಿವರಾಜ ಪಾಟೀಲ್, ಐಇಸಿ ಸಂಯೋಜಕ ಉಮೇಶ ಮಲಗಿ, ಎಂಐಎಸ್ ಸಂಯೋಜಕ ಎಂ.ಡಿ. ಮೌಲಾನ್, ತಾಂತ್ರಿಕ ಸಹಾಯಕ ಪವನಕುಮಾರ ನಿಟ್ಟೂರೆ, ಬಿಎಫ್ಟಿ ಸುನಿಲ್ಕುಮಾರ, ಪಿಡಿಒ ನಾಗಯ್ಯಾ ಸ್ವಾಮಿ, ಗ್ರಾಪಂ ಸದ್ಯಸರಾದ ಆನಂದ ಕುಂಟಬಾಬೊನೋರ್, ತಾಹೇರ್ಮಿಯ್ಯಾ, ರವಿ ರಾಂಪೂರೆ, ಶ್ರೀಧರ್ ಚೀನಕೇರಾ, ರಾಮಶೆಟ್ಟಿ ಹಣಮಶೆಟ್ಟಿ, ಚಂದ್ರಕಾಂತ ರೇಂಜೆರಿ ಇತರಿದ್ದರು.