ಔರಾದ್: ತಾಲೂಕಿನ ಎಕ್ಕಂಬಾ, ಹುಲ್ಯಾಳ, ಖಂಡೆಕೇರಿ, ಜಮಾಲಪುರ ಕೆರೆಗಳ ನೀರು ನಾಲೆಗೆ ಹರಿಸಬೇಕೆಂದು ಆಗ್ರಹಿಸಿ ಮಂಗಳವಾರ ನಾರಾಯಣಪುರ ಸೇತುವೆ ಹತ್ತಿರ ಕನ್ನಡಪರ ಸಂಘಟನೆ ಸದಸ್ಯರು ಮತ್ತು ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರರಿಗೆ ಮನವಿಪತ್ರ ಸಲ್ಲಿಸಿ ಮಾತನಾಡಿದ ಪ್ರಮುಖರು ಈ ನಾಲ್ಕು ಕೆರೆಗಳಿಂದ ನಾಲೆಗೆ ನೀರು ಹರಿಸಿದರೆ ಬಾದಲಗಾಂವ ಗ್ರಾಪಂ ವ್ಯಾಪ್ತಿಗೆ ಬರುವ ಸುಮಾರು ಗ್ರಾಮಗಳ ರೈತರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ನೀರು ಬಿಡಬೇಕು ಎಂದು ಪ್ರಮುಖರು ಒತ್ತಾಯಿಸಿದರು.
ನೀರಿಲ್ಲದೆ ಹಿಂಗಾರು ಬೆಳೆ ಹಾಳಾಗುತ್ತಿದ್ದು, ಕೋಟ್ಯಾಂತರ ರೂ.ಖರ್ಚು ಮಾಡಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಮಾಡಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗಿ ಹೋಗುತ್ತಿದೆ. ಕೂಡಲೇ ಎಚ್ಚೆತ್ತು ನೀರು ಬಿಡಬೇಕು ಇಲ್ಲವಾದಲಿ ೪ರಂದು ಜಿಲ್ಲಾ ಕಚೇರಿ ಮುಂದೆ ಹೋರಾಟ ಮಾಡಲಾಗುವುದು ಎಚ್ಚರಿಸಿದರು.
ಪ್ರಮುಖರಾದ ರಾಜಕುಮಾರ ಎಡವೆ, ಅನಿಲ ಬೆಲೂರೆ, ಶಿವಶಂಕರ ನಿಸ್ಪತ್ತೆ, ಅನಿಲ ದೇವಕತ್ತೆ, ಬಾಲಾಜಿ ದಾಮಾ, ಪ್ರಶಾಂತ ಶಿಂಧೆ, ಸೋಪಾನರಾವ ಶೇರಿಕಾರ, ಸೂರ್ಯಕಾಂತ ಪಾಟೀಲ, ದೇವಿದಾಸ ಬಿರಾದಾರ, ನಾಮದೇವ, ಬಾಲಾಜಿ ಬಿರಾದಾರ, ನಾಗನಾಥ ಬಿರಾದಾರ, ಶಿವಕುಮಾರ ಬಿರಾದಾರ, ಗಣಪತಿ, ಪಂಢರಿನಾಥ, ಬಾಬುರಾವ, ಶಿವಾಜಿ ಇತರರಿದ್ದರು.